ಡಿ.25 ರ ವರೆಗೆ ನಾನು ಏನೂ ಹೇಳುವದಿಲ್ಲ: ಜನಾರ್ಧನ ರೆಡ್ಡಿ

ಹೊಸದಿಗಂತ ವರದಿ,ಗದಗ:

ನಾನು ೧೨ ವರ್ಷ ವನವಾಸವನ್ನು ಅನುಭವಿಸಿದಂತಾಗಿದೆ. ಹೀಗಾಗಿ ಉತ್ತರ ಕರ್ನಾಟಕದ ಗಾಳಿ-ಬೆಳಕು ಬೇಕಾಗಿದೆ. ಈ ಜನರ ಮದ್ಯದಲ್ಲಿ ಓಡಾಡಿದರೆ ಮನಸ್ಸಿಗೂ ದೇಹಕ್ಕೂ ಖುಷಿ ಸಿಗುತ್ತೆ ಮಾಜಿ ಸಚಿವ ಜನಾರ್ದನರೆಡ್ಡಿ ಅವರು ಹೇಳಿದರು.
ನಗರದಲ್ಲಿ ಮಂಗಳವಾರ ನಗರದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿ.೨೫ ವರೆಗೂ ನಾನು ಯಾವುದನ್ನು ಹೇಳುವುದಿಲ್ಲ, ಆ ದಿನದಂದು ರಾಜ್ಯದ ಜನರಿಗೆ ನನ್ನ ನಡೆ ಬಗ್ಗೆ ಹೇಳುತ್ತೇನೆ. ಯಾವುದೇ ಕಾರಣಕ್ಕೂ ಈಗ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ, ಬೆಂಗಳೂರಿನಲ್ಲಿ ಇರಲು ಆಗುತ್ತಿಲ್ಲ ಬಳ್ಳಾರಿ ಹೋಗಲು ಸಾಧ್ಯವಾಗಲ್ಲ, ಹೀಗಾಗಿ ಆಗಾಗ ಉತ್ತರ ಕರ್ನಾಟಕದ ಪ್ರವಾಸದಲ್ಲಿರುತ್ತೇನೆ ಎಂದರು.

ಪಂ. ಪುಟ್ಟರಾಜ ಗವಾಯಿಗಳು ಹಾಗೂ ತೋಂಟದಾರ್ಯ ಶ್ರೀಗಳು ಇವಾಗ ಇಲ್ಲ, ಅವರು ಇದ್ದಾಗ ಅನೇಕ ವೇದಿಕೆಗಳನ್ನು ಅವರೊಂದಿಗೆ ಹಂಚಿಕೊಂಡಿದ್ದೆ, ಹೀಗಾಗಿ ಉಭಯಪೂಜ್ಯರ ಕತೃಗದ್ದುಗೆಗಳ ದರ್ಶನ ಪಡೆದುಕೊಂಡಿದ್ದೆನೆ ಎಂದು ಹೇಳಿದರು.

ಇದಕ್ಕೂ ಮುನ್ನ ಆಪ್ತಮಿತ್ರ ಸಚಿವ ಬಿ.ಶ್ರೀರಾಮುಲು ಮನೆಯಲ್ಲಿ ವಾಸ್ತವ್ಯ ಮಾಡಿದ್ದ ಜನಾರ್ಧನ ರಡ್ಡಿ ನಗರದ ವೀರೇಶ್ವರ ಪುಣ್ಯಾಶ್ರಮ ಮತ್ತು ತೋಂಟದಾರ್ಯ ಮಠಗಳಿಗೆ ಭೇಟಿ ನೀಡಿ ದರ್ಶನ ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!