ನಾನು, ನಿಮ್ಮ ಮಗಳು ನಿಮ್ಮ ಸಾಧನೆ,ಬೆಳವಣಿಗೆಗೆ ಹೆಮ್ಮೆ ಪಡುತ್ತೇವೆ: ಕೊಹ್ಲಿ ಕುರಿತು ಅನುಷ್ಕಾ ಶರ್ಮಾ ಬರೆದ ಮನದಾಳದ ಮಾತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಟೆಸ್ಟ್​ ನಾಯಕತ್ವದಿಂದ ಕೆಳಗಿದ ವಿರಾಟ್​ ಕೊಹ್ಲಿ ಕುರಿತು ಪತ್ನಿ ಅನುಷ್ಕಾ ಶರ್ಮಾ ಸುದೀರ್ಘ ಬರಹದ ಮೂಲಕ ಪಯಣದ ಏಳು-ಬೀಳುಗಳನ್ನು ಹಂಚಿಕೊಂಡಿದ್ದಾರೆ.
ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ಕುರಿತು ಬರೆದ ಅನುಷ್ಕಾ, ನನಗೆ ಇನ್ನೂ ನೆನಪಿದೆ 2014ರಲ್ಲಿ ಎಂಎಸ್​ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ನೀವು ಭಾರತ ತಂಡದ ನಾಯನಾಗಿ ನೇಮಕವಾದ ವಿಷಯ ತಿಳಿಸಿದ್ದೀರಿ.

ಅಂದು ಎಂಎಸ್,​ ನೀವು ಮತ್ತು ನಾನು ಮಾತನಾಡಿದ್ದು ಮತ್ತು ನಿಮ್ಮ ಗಡ್ಡ ಇಷ್ಟು ಬೇಗನೆ ಬೂದು ಬಣ್ಣಕ್ಕೆ ತಿರುಗುತ್ತಿದೆ ಎಂದು ಅವರು ನಿಮ್ಮನ್ನ ತಮಾಷೆ ಮಾಡಿದ್ದರು. ಅಂದು ನಾವೆಲ್ಲರೂ ಚೆನ್ನಾಗಿ ನಕ್ಕಿದ್ದೆವು. ಆದರೆ ಆ ನಗುವಿನ ಜೊತೆಗೆ ನಾನು ಅಂದಿನಿಂದ ಕೇವಲ ನಿಮ್ಮ ಗಡ್ಡ ಬೂದು ಬಣ್ಣಕ್ಕೆ ತಿರುಗುವುದಕ್ಕಿಂತಲೂ ಹೆಚ್ಚು ನಿಮ್ಮ ಬೆಳವಣಿಯನ್ನು ನೋಡಿದ್ದೇನೆ. ನಿಮ್ಮಲಿ ಆದಂತಹ ಆ ಅಪಾರ ಬೆಳವಣಿಗೆ ಕಂಡಿದ್ದೇನೆ.

ಭಾರತ ಕ್ರಿಕೆಟ್​ ತಂಡದ ನಾಯಕನಾಗಿ ನಿಮ್ಮ ಆದ ಬೆಳವಣಿಗೆ ಮತ್ತು ಭಾರತ ತಂಡ ನಿಮ್ಮ ನಾಯಕತ್ವದಲ್ಲಿ ಮಾಡಿರುವ ಸಾಧನೆಗಳಿಗೆಲ್ಲಾ ನಾನು ಹೆಮ್ಮೆ ಪಡುತ್ತೇನೆ. ಆದರೆ, ಅದರಲ್ಲೂ ನೀವು ನಿಮ್ಮೊಳಗೆ ಸಾಧಿಸಿದ ಬೆಳವಣಿಗೆಯ ಬಗ್ಗೆ ನಾನು ಹೆಚ್ಚು ಹೆಮ್ಮೆಪಡುತ್ತೇನೆ.

ನೀವು ತಂಡವನ್ನು ಮುನ್ನೆಡೆಸುವಾಗ ಗೆಲುವಿಗಾಗಿ ತಮ್ಮ ಶಕ್ತಿಯನ್ನೆಲ್ಲಾ ದಾರೆಯರೆದಿದ್ದೀರಿ. ತಂಡ ಸೋತಾಗ ನಿಮ್ಮ ಕಣ್ಣುಗಳಲ್ಲಿ ನೀರು ಬರುವ ಸಂದರ್ಭದಲ್ಲಿ ನಾನು ನಿಮ್ಮ ಪಕ್ಕದಲ್ಲಿ ಕುಳಿತಿದ್ದೇನೆ. ಆದರೆ, ನೀವು ಆಗ ತಂಡಕ್ಕಾಗಿ ಇನ್ನೂ ಏನಾದರೂ ಮಾಡಬಹುದಿತ್ತು ಎಂದು ಆಲೋಚನೆಯಲ್ಲಿರುತ್ತಿದ್ದಿರಿ.

ನೀವು ಅಸಾಮಾನ್ಯ ಮತ್ತು ನೇರವಾಗಿ ಮಾತನಾಡುವವರಾಗಿದ್ದಿರಿ. ಈ ರೀತಿಯ ತೋರ್ಪಡಿಸುವಿಕೆಯ ಗುಣ ನಿಮ್ಮ ವೈರಿಯಾಗಿತ್ತು. ನೀವು ಇಂತಹದನ್ನೇ ನೀವು ಪ್ರತಿಯೊಬ್ಬರಿಂದಲೂ ನಿರೀಕ್ಷಿಸುತ್ತೀರಿ. ಇದು ನನ್ನ ಮತ್ತು ನಿಮ್ಮ ಅಭಿಮಾನಿಗಳ ದೃಷ್ಟಿಯಲ್ಲಿ ನಿಮ್ಮನ್ನು ಶ್ರೇಷ್ಠರನ್ನಾಗಿ ಮಾಡಿದೆ .

ತಮ್ಮ ಮಗಳು ವಮಿಕಾ ಕೂಡ ತನ್ನ ತಂದೆಯ ಬಗ್ಗೆ ಹೆಮ್ಮೆ ಪಡುತ್ತಾಳೆ. ಏಕೆಂದರೆ, ಈ ಎಲ್ಲದರ ಹಿಂದೆ ನಿಮ್ಮ ಶುದ್ಧ, ಕಲಬೆರಕೆ ಇಲ್ಲದ ಉದ್ದೇಶಗಳು ಯಾವಾಗಲೂ ನಿಮ್ಮ ಆಲೋಚನೆಯಲ್ಲಿರುತ್ತಿದ್ದೆವು. ಪ್ರತಿಯೊಬ್ಬರು ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಾನು ಹೇಳಿದಂತೆ ನಿಮ್ಮನ್ನು ತಿಳಿದುಕೊಳ್ಳಲು ಪ್ರಯತ್ನಿಸಿದವರು ನಿಜವಾಗಿಯೂ ಧನ್ಯರು.

ನೀವು ಪರಿಪೂರ್ಣರು ಎಂದು ಎಲ್ಲೂ ತೋರಿಸಿಲ್ಲ ಮತ್ತು ನೀವು ನ್ಯೂನತೆಗಳನ್ನು ಹೊಂದಿದ್ದಿರಿ. ಅವುಗಳನ್ನು ನೀವು ಮರೆಮಾಚಲು ಪ್ರಯತ್ನಿಸುತ್ತಿರಲಿಲ್ಲ. ಸರಿಯಾದ ಕೆಲಸ ಮಾಡುವುದಕ್ಕೆ ಯಾವಾಗಲೂ ನಿಲ್ಲುತ್ತಿದ್ದಿರಿ, ನೀವು ದುರಾಶೆಯಿಂದ ಏನನ್ನು ಸಾಧಿಸಿಲ್ಲ ಎನ್ನುವುದು ನನಗೆ ತಿಳಿದಿದೆ. ಒಬ್ಬ ವ್ಯಕ್ತಿ ಆ ಭಾವನೆಯಿಂದ ಯಾವುದನ್ನಾದರೂ ಸಾಧಿಸಬೇಕೆಂದು ಪ್ರಯತ್ಸಿಸಿದರೆ ಅವರು ತಮ್ಮನ್ನು ತಾವೂ ಮಿತಿಗೊಳಿಸಿಕೊಳ್ಳಿತ್ತಾರೆ ಎಂಬುದು ನಿಮ್ಮಲ್ಲಿನ ಭಾವನೆಯಾಗಿತ್ತು ಎಂದು ಅನುಷ್ಕಾ ಶರ್ಮಾ ಮುಕ್ತ ಬರಹದ ಮೂಲಕ ವಿರಾಟ್ ಸಾಧನೆಯನ್ನು ಹೊಗಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!