Thursday, August 11, 2022

Latest Posts

ಐಸಿಸಿಯಿಂದ ಅಶ್ವಿನ್ ಗೆ ‘ತಿಂಗಳ ಆಟಗಾರ’ ಪ್ರಶಸ್ತಿ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ರವಿಚಂದ್ರನ್ ಅಶ್ವಿನ್ ಐಸಿಸಿಯಿಂದ ಫೆಬ್ರವರಿ ತಿಂಗಳ ಆಟಗಾರನಾಗಿ ಆಯ್ಕೆಯಾಗಿದ್ದಾನೆ.
ಇತ್ತೀಚಿನ ಅವರ ನಿರ್ವಹಣೆಯು ಅವರಿಗೆ ಈ ಗೌರವ ತಂದುಕೊಟ್ಟಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಶ್ವಿನ್ 32 ವಿಕೆಟ್ ಕಿತ್ತುದಲ್ಲದೆ ಬ್ಯಾಟಿಂಗಿನಲಲಿ 189 ರನ್ ಗಳಿಸಿದ್ದರು.
ಮಹಿಳಾ ವಿಭಾಗದಲ್ಲಿ ಇಂಗ್ಲೆಂಡಿನ ಟ್ಯಾಮ್ಮಿ ಬಿಮೋಂಟ್ ತಿಂಗಳ ಕ್ರಿಕೆಟಿಗರಾಗಿ ಆಯ್ಕೆಯಾಗಿದ್ದಾರೆ.
ವಿಕೆಟ್ ಕೀಳುಗೆಯಲ್ಲಿ ಅಶ್ವಿನ್ ಅವರ ಕನ್‌ಸಿಸ್ಟೆನ್ಸಿ ಭಾರತವು ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಎರಡನೆ ಟೆಸ್ಟಿನಲ್ಲಿ ಅವರ ಶತಕ ಕೂಡ ಅತ್ಯಮೂಲ್ಯವಾಗಿತ್ತು ಎಂದು ಐಸಿಸಿಯ ವೋಟಿಂಗ್ ಅಕಾಡೆಮಿಯ ಇಯಾನ್ ಬಿಷಪ್ ಹೇಳಿದ್ದಾರೆ.
ಭಾರತದ ಅಕ್ಷರ್ ಪಟೇಲ್ ಸರಣಿಯಲ್ಲಿ 27 ವಿಕೆಟ್ ಗಳಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss