ಐಸಿಸಿ ಟಿ-20 Ranking: 4ನೇ ಸ್ಥಾನ ಉಳಿಸಿಕೊಂಡ ಕೆ ಎಲ್ ರಾಹುಲ್, 10ನೇ ಸ್ಥಾನದಲ್ಲಿ ಕೊಹ್ಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಸಿಸಿ ಟಿ-20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರತ ತಂಡದ ಆರಂಭಿಕ ಬ್ಯಾಟರ್​ ಕೆ ಎಲ್ ರಾಹುಲ್​ 4ನೇ ಸ್ಥಾನ ಉಳಿಸಿಕೊಂಡಿದ್ದರೆ, ವಿರಾಟ್​ ಕೊಹ್ಲಿ 10ನೇ ಸ್ಥಾನದಲ್ಲಿದ್ದಾರೆ.
ಬುಧವಾರ ಐಸಿಸಿ ಬಿಡುಗಡೆ ಮಾಡಿರುವ ನೂತನ ಟಿ-20 ಶ್ರೇಯಾಂಕದಲ್ಲಿ ಪಾಕಿಸ್ತಾನದ ಬ್ಯಾಟರ್​ಗಳಾದ ಬಾಬರ್​ ಅಜಮ್(805) ಮತ್ತು ಮೊಹಮ್ಮದ್​ ರಿಜ್ವಾನ್​(798) ಅಗ್ರ 2 ಸ್ಥಾನದಲ್ಲಿ ಮುಂದುವರೆದಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ11ನೇ ಸ್ಥಾನದಲ್ಲಿದ್ದಾರೆ.
ಭಾರತದ ಬೌಲರ್​ ಅಗ್ರ 10 ಸ್ಥಾನಗಳಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದು, ಭುವನೇಶ್ವರ್​ ಕುಮಾರ್​ 21ನೇ ಸ್ಥಾನ ಪಡೆದಿದ್ದಾರೆ.
ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿರುವ ಆಸೀಸ್​ ವೇಗಿ 4 ಸ್ಥಾನ ಮೇಲೇರಿ 2ಕ್ಕೆ ಬಡ್ತಿ ಪಡೆದರೆ, ಅಗ್ರಸ್ಥಾನದಲ್ಲಿದ್ದ ಶ್ರೀಲಂಕಾ ಆಲ್​ರೌಂಡರ್​ ವನಿಡು ಹಸರಂಗ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ದಕ್ಷಿಣ ಆಫ್ರಿಕಾದ ಸ್ಪಿನ್ನರ್​ ತಬ್ರೈಜ್ ಶಮ್ಸಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಆಲ್​ರೌಂಡರ್​ ರ‍್ಯಾಂಕಿಂಗ್​​ನಲ್ಲಿ ಆಫ್ಘಾನಿಸ್ತಾನದ ಮೊಹಮ್ಮದ್ ನಬಿ(265) ಅಗ್ರಸ್ಥಾನದಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!