Tuesday, August 16, 2022

Latest Posts

ಐಸಿಸಿ ಟಿ-20 ರ್‍ಯಾಂಕಿಂಗ್‌: ಕೊಹ್ಲಿ ಐದು, ರಾಹುಲ್ 8ನೇ ಸ್ಥಾನಕ್ಕೆ ಕುಸಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಸಿಸಿ ಟಿ-20 ಬ್ಯಾಟ್ಸ್‌ಮನ್‌ಗಳ ರ್‍ಯಾಂಕಿಂಗ್‌ನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಒಂದು ಸ್ಥಾನ ಕುಸಿದು ಐದನೇ ಸ್ಥಾನಕ್ಕೆ ಇಳಿದಿದ್ದಾರೆ. ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಎರಡು ಸ್ಥಾನ ಕುಸಿದು 8ನೇ ಸ್ಥಾನದಲ್ಲಿದ್ದಾರೆ.
ದುಬೈನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಸೂಪರ್ 12ರ ಹಂತದ ಪಂದ್ಯದಲ್ಲಿ ಕೊಹ್ಲಿ (725 ರೇಟಿಂಗ್ ಪಾಯಿಂಟ್) 49 ಎಸೆತಗಳಲ್ಲಿ 57 ರನ್ ಬಾರಿಸಿದರೆ, ರಾಹುಲ್ (684 ರೇಟಿಂಗ್ ಪಾಯಿಂಟ್)3 ರನ್ ಗಳಿಸಿದ್ದರು.
ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಅವರು ಭಾರತದ ವಿರುದ್ಧ 79 ಮತ್ತು ನ್ಯೂಜಿಲೆಂಡ್ ವಿರುದ್ಧ 33 ರನ್ ಗಳಿಸುವ ಮೂಲಕ 3 ಸ್ಥಾನಗಳು ಮೇಲೇರಿ ವೃತ್ತಿ ಜೀವನದ ಅತ್ಯುತ್ತಮ ನಾಲ್ಕನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಕ್ರಮವಾಗಿ 40 ಮತ್ತು 51 ರನ್ ಗಳಿಸಿದ ದಕ್ಷಿಣ ಆಫ್ರಿಕಾ ಬ್ಯಾಟರ್ ಏಡೆನ್ ಮಾರ್ಕರಮ್ ಅವರು ತಮ್ಮ ವೃತ್ತಿಜೀವನದ ಅತ್ಯುತ್ತಮ ಹಂತಕ್ಕೆ ಏರಿದ್ದಾರೆ. ಎಂಟು ಸ್ಥಾನಗಳ ಮೇಲೇರಿ ಮೂರನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಡೇವಿಡ್ ಮಲಾನ್ (831) ಮತ್ತು ಪಾಕಿಸ್ತಾನದ ನಾಯಕ ಬಾಬರ್ ಅಜಮ್ (820) ಮೊದಲ ಎರಡು ಸ್ಥಾನದಲ್ಲಿದ್ದಾರೆ.
ಮಾರ್ಕರಮ್ ಅವರ ಹಿಂದಿನ ಅತ್ಯುತ್ತಮ ರ್‍ಯಾಂಕಿಂಗ್ ಒಂಬತ್ತನೇ ಸ್ಥಾನವಾಗಿತ್ತು. ಟಿ-20ಯಲ್ಲಿ ಅವರು 147.29 ಸ್ಟ್ರೈಕ್ ರೇಟ್‌ನೊಂದಿಗೆ ಸುಮಾರು 40 ರ ಸರಾಸರಿಯನ್ನು ಹೊಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!