ಐಸಿಸಿ ಟಿ20 ಸೆಮೀಸ್: ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಅಂತಿಮ ಹಂತ ತಲುಪಿದ್ದು, ಅಡಿಲೇಡ್‌ನಲ್ಲಿ ಪಂದ್ಯ ಆರಂಭವಾಗಲಿದೆ. ಭಾರತ ಹಾಗೂ ಇಂಗ್ಲೆಂಡ್ ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈಗಾಗಲೇ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿರುವ ಪಾಕಿಸ್ತಾನ ಫೈನಲ್ ತಲುಪಿದೆ.

ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್‌ನಲ್ಲಿ ಪಾಕಿಸ್ತಾನದ ಎದುರಾಳಿಯಾಗಲಿದೆ. ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಸಾಂಪ್ರದಾಯಿಕ ಎದುರಾಳಿ ಪಾಕ್‌ನ್ನು ಸೋಲಿಸಲು ಭಾರತ ಈ ಪಂದ್ಯ ಗೆದ್ದು ಫೈನಲ್ಸ್‌ಗೆ ಎಂಟ್ರಿ ನೀಡಬೇಕಿದೆ. ಅಡಿಲೇಡ್‌ನಲ್ಲಿ ಇಂದು ಹೈ ವೋಲ್ಟೇಜ್ ಪಂದ್ಯ ನಡೆಯಲಿದ್ದು, ಗೆಲುವು ಸಾಧಿಸುವುದು ಎರಡೂ ತಂಡಕ್ಕೂ ಅತಿಮುಖ್ಯವಾಗಿದೆ. ಭಾರತ ತಂಡ ಅಡಿಲೇಡ್‌ನಲ್ಲಿ ಈವರೆಗೂ ಎರಡು ಪಂದ್ಯ ಆಡಿದ್ದು, ಎರಡರಲ್ಲೂ ಗೆಲುವು ಸಾಧಿಸಿದೆ. ವಿಶ್ವಾಸದಿಂದಿರುವ ರೋಹಿತ್ ಪಡೆ ಗೆಲುವು ನಮ್ಮದೇ ಎಂದಿದೆ. ಭಾರತದ ಬ್ಯಾಟಿಂಗ್ ಶಕ್ತಿ ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!