ಐಸಿಸಿ ವರ್ಷದ ಅತ್ಯುತ್ತಮ ಟಿ20 ತಂಡ: ಟೀಮ್ ಇಂಡಿಯಾದ ಮೂವರಿಗೆ ಸ್ಥಾನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಐಸಿಸಿ (ICC) 2022ರ ಅತ್ಯುತ್ತಮ ಟಿ20 ತಂಡವನ್ನು ಪ್ರಕಟಿಸಿದ್ದು, ಇದ್ರಲ್ಲಿ ಮೂವರು ಭಾರತೀಯ ಆಟಗಾರರಿಗೆ ಸ್ಥಾನ ನೀಡಿದೆ.

ಐಸಿಸಿ ವರ್ಷದ ಟಿ20 ತಂಡದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ (Virat Kohli , Suryakumar Yadav and Hardik Pandya) ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನುಳಿದಂತೆಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್‌ಗೆ (Jos Buttler) ವಹಿಸಲಾಗಿದೆ.

ಇನ್ನು ಐಸಿಸಿ ಆಯ್ಕೆ ಮಾಡಿರುವ ತಂಡದಲ್ಲಿ ಯಾವ ದೇಶದ ಎಷ್ಟು ಆಟಗಾರರು ಸ್ಥಾನ ಪಡೆದಿದ್ದಾರೆ ಅಂದರೆ, ಇಂಗ್ಲೆಂಡ್ ತಂಡದಿಂದ ಐಸಿಸಿ ತಂಡದ ನಾಯಕತ್ವ ವಹಿಸಿರುವ ಜೋಸ್ ಬಟ್ಲರ್ ಸೇರಿದಂತೆ, ವಿಶ್ವಕಪ್​ನಲ್ಲಿ ಮ್ಯಾನ್​ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದ ಸ್ಯಾಮ್ ಕರನ್ ಕೂಡ ಸ್ಥಾನ ಪಡೆದಿದ್ದಾರೆ. ಪಾಕಿಸ್ತಾನ ತಂಡದಿಂದ ಮೊಹಮ್ಮದ್ ರಿಜ್ವಾನ್ ಹಾಗೂ ಹ್ಯಾರಿಸ್ ರೌಫ್ ಸ್ಥಾನ ಪಡೆದಿದ್ದಾರೆ.

ನ್ಯೂಜಿಲೆಂಡ್ ತಂಡದಿಂದ ಗ್ಲೆನ್ ಫಿಲಿಪ್ಸ್ ಆಟಗಾರ ಆಯ್ಕೆಯಾಗಿದ್ದರೆ, ಜಿಂಬಾಬ್ವೆ ತಂಡದಿಂದ ಸಿಕಂದರ್ ರಜಾ ಆಯ್ಕೆಯಾಗಿದ್ದಾರೆ. ಹಾಗೆಯೇ ಶ್ರೀಲಂಕಾ ತಂಡದಿಂದ ವನಿಂದು ಹಸರಂಗಾ , ಕ್ರಿಕೆಟ್ ಶಿಶು ಐರ್ಲೆಂಡ್ ತಂಡದಿಂದ ಜೋಶ್ ಲಿಟಲ್ ಐಸಿಸಿ ವಾರ್ಷಿಕ ತಂಡಕ್ಕೆ ಆಯ್ಕೆಯಾಗಿದ್ದಾರೆ.

ತಂಡ ಹೀಗಿದೆ.
ಜೋಸ್ ಬಟ್ಲರ್‌ (ನಾಯಕ- ಇಂಗ್ಲೆಂಡ್), ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ), ವಿರಾಟ್ ಕೊಹ್ಲಿ (ಭಾರತ), ಸೂರ್ಯಕುಮಾರ್ ಯಾದವ್ (ಭಾರತ),ಗ್ಲೆನ್ ಫಿಲಿಪ್ಸ್ (ನ್ಯೂಜಿಲೆಂಡ್), ಸಿಕಂದರ್ ರಜಾ (ಜಿಂಬಾಬ್ವೆ), ಹಾರ್ದಿಕ್ ಪಾಂಡ್ಯ (ಭಾರತ), ಸ್ಯಾಮ್ ಕರನ್ (ಇಂಗ್ಲೆಂಡ್), ವನಿಂದು ಹಸರಂಗಾ (ಶ್ರೀಲಂಕಾ), ಹ್ಯಾರಿಸ್ ರೌಫ್ (ಪಾಕಿಸ್ತಾನ), ಜೋಶ್ ಲಿಟಲ್ (ಐರ್ಲೆಂಡ್).

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!