Thursday, July 7, 2022

Latest Posts

ಐಸಿಸಿ ಟೆಸ್ಟ್​ ಶ್ರೇಯಾಂಕ: ಐದನೇ ಸ್ಥಾನದಲ್ಲಿ ಕೊಹ್ಲಿ, 6ಕ್ಕೇರಿದ ಪಂತ್!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಐಸಿಸಿ ಟೆಸ್ಟ್​ ಶ್ರೇಯಾಂಕದಲ್ಲಿ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಐದನೇ ಶ್ರೇಯಾಂಕ ಉಳಿಸಿಕೊಂಡಿದ್ದರೆ, ಪಂತ್ 6ನೇ ಸ್ಥಾನಕ್ಕೇರುವ ಮೂಲಕ ಟಾಪ್ 10 ಪ್ರವೇಶಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಶತಕ ಸೇರಿದಂತೆ 270 ರನ್​ ಗಳಿಸಿದ್ದ 23ರ ಹರೆಯದ ಪಂತ್ ಜಂಟಿ 9ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
ಆರಂಭಿಕ ಬ್ಯಾಟ್ಸ್​ಮನ್ ರೋಹಿತ್ ಶರ್ಮಾ 8ನೇ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ಟೆಸ್ಟ್​ ಸರಣಿಯಲ್ಲಿ ಒಂದು ದ್ವಿಶತಕ ಮತ್ತು ಒಂದು ಶತಕ ಸಹಿತ 3 ಇನ್ನಿಂಗ್ಸ್​ಗಳಲ್ಲಿ 428 ರನ್​ ಗಳಿಸಿದ್ದ ಶ್ರೀಲಂಕಾ ತಂಡದ ನಾಯಕ ದಿಮುತ್ ಕರುಣರತ್ನೆ 11 ಸ್ಥಾನ ಮೇಲೇರಿ 11ನೇ ಶ್ರೇಯಾಂಕ ಪಡೆದಿದ್ದಾರೆ.
ಪೂಜಾರ 14, ರಹಾನೆ 15ನೇ ಸ್ಥಾನದಲ್ಲಿದ್ದಾರೆ
ನ್ಯೂಜಿಲ್ಯಾಂಡ್​ ತಂಡದ ನಾಯಕ ಕೇನ್ ವಿಲಿಯಮ್ಸನ್(919)​ ಅಗ್ರ ಸ್ಥಾನದಲ್ಲಿದ್ದರೆ, ಸ್ಟೀವ್ ಸ್ಮಿತ್(891), ಲಾನುಶೇನ್(878) ಮತ್ತು ಜೋ ರೂಟ್​(831) ಕೊಹ್ಲಿಗಿಂತ ಮೇಲಿನ ಸ್ಥಾನದಲ್ಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss