Monday, August 15, 2022

Latest Posts

ಐಸಿಸಿ ವಲ್ಡ್ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌: ಲಾರ್ಡ್ಸ್ ನಿಂದ ಸೌತಾಂಪ್ಟನ್ʼಗೆ ಶಿಫ್ಟ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಜೂನ್ 18ರಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಬೇಕಿರುವ ಐಸಿಸಿ ವಲ್ಡ್ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ ಪಂದ್ಯ ಸೌತಾಂಪ್ಟನ್ ನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ.
ಲಂಡನ್ʼನ ಲಾರ್ಡ್ಸ್ʼನಲ್ಲಿ ನಡೆಯಬೇಕಿದ್ದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಸೌತಾಂಪ್ಟನ್ʼಗೆ ಸ್ಥಳಾಂತರವಾಗಿದೆ. ಸ್ಥಳ ಬದಲಾವಣೆ ಬಗ್ಗೆ ಊಹಾಪೋಹಗಳಿಗೆ ತೆರೆ ಎಳೆದಿರುವ ಐಸಿಸಿಯು ಸೌತಾಂಪ್ಟನ್ʼಗೆ ಸ್ಥಳಾಂತರವನ್ನೂ ಖಚಿತಪಡಿಸಿದೆ.
ಗಂಗೂಲಿ ‘ಸೌತಾಂಪ್ಟನ್ʼನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ನಲ್ಲಿ ಪಾಲ್ಗೊಳ್ಳಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss