ಮಿತಿಮೀರಿದ ಆ್ಯಂಟಿಬಯೋಟಿಕ್‌ ಬಳಕೆ: ಅತಿಯಾದ ಬಳಕೆ ಪ್ರಮಾದಕರ ಎಂದ ಐಸಿಎಂಆರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಇತ್ತೀಚೆಗೆ ಪ್ರತಿಜೀವಕಗಳ ಬಳಕೆಗೆ ಸಂಬಂಧಿಸಿದಂತೆ ಹಲವಾರು ಮಾರ್ಗಸೂಚಿಗಳನ್ನು ನೀಡಿದೆ. ಆ್ಯಂಟಿಬಯೋಟಿಕ್ ಗಳ ಮುಕ್ತ ಬಳಕೆಯಿಂದ ರೋಗಾಣುಗಳಲ್ಲಿ ಅವುಗಳನ್ನು ತಡೆದುಕೊಳ್ಳುವ ಸಾಮರ್ಥ್ಯ (ಆ್ಯಂಟಿ ಮೈಕ್ರೊಬಿಯಲ್ ರೆಸಿಸ್ಟೆನ್ಸ್) ಹೆಚ್ಚುತ್ತಿದೆ ಎಂದು ತಿಳಿದುಬಂದಿದೆ.

ಇತ್ತೀಚಿನ ದಿನಗಳಲ್ಲಿ ಆ್ಯಂಟಿಬಯೋಟಿಕ್‌ಗಳ ಬಳಕೆ ವಿಪರೀತವಾಗಿ ಹೆಚ್ಚಿದೆ. ಎಲ್ಲದಕ್ಕೂ ಅವನ್ನು ಅತಿಯಾಗಿ ಬಳಸಲಾಗುತ್ತಿದ್ದು, ಸ್ವಲ್ಪ ಜ್ವರ ಬಂದರೂ ವೈದ್ಯರ ಸಲಹೆ ಪಡೆಯದೆ ಆ್ಯಂಟಿಬಯೋಟಿಕ್ಸ್ ನುಂಗುತ್ತಾರೆ. ಆದರೆ, ಇವುಗಳನ್ನು ಮನಬಂದಂತೆ ಬಳಸುವುದು ಒಳ್ಳೆಯದಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.

ಸೌಮ್ಯವಾದ ಜ್ವರವನ್ನು ಹೊಂದಿದ್ದರೆ, ಅಂದರೆ 100.4 ರಿಂದ 102.2 ಡಿಗ್ರಿಗಳ ನಡುವೆ (ಕಡಿಮೆ ದರ್ಜೆಯ ಜ್ವರ) ಅವುಗಳನ್ನು ಬಳಸದಂತೆ ಸಲಹೆ ನೀಡಲಾಗುತ್ತದೆ. ಕೆಮ್ಮು, ಕಫ, ಆಯಾಸ, ಉಸಿರಾಟದ ತೊಂದರೆ (ವೈರಲ್ ಬ್ರಾಂಕೈಟಿಸ್), ಶೀತ ಮತ್ತು ಸ್ವಲ್ಪ ಜ್ವರ ಮುಂತಾದ ಬ್ರಾಂಕೈಟಿಸ್ ರೋಗಲಕ್ಷಣಗಳಿಗೆ ಪ್ರತಿಜೀವಕಗಳ ಬಳಕೆಯನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಅವುಗಳನ್ನು ಬಳಸಬೇಕಾದರೆ ರೋಗಿಯ ಆರೋಗ್ಯದ ಬಗ್ಗೆ ಪರಿಗಣಿಸಲು ಸೂಚಿಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!