ಐಸಿಎಸ್‌ಇ, ಐಎಸ್‌ಸಿ ಪರೀಕ್ಷೆಯ ಫಲಿತಾಂಶ ಔಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ಭಾರತೀಯ ಪ್ರೌಢ ಶಿಕ್ಷಣದ ಪ್ರಮಾಣಪತ್ರ (ICSE Class 10) ಮತ್ತು ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ (ISC Class 12) 2023 ರ ಫಲಿತಾಂಶಗಳನ್ನು ಇಂದು ಮಧ್ಯಾಹ್ನ ಪ್ರಕಟಿಸಿದೆ.

ಇದೀಗ ವಿದ್ಯಾರ್ಥಿಗಳು CISCE ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. cisce.org ಅಥವಾ results.cisce.org. ವೆಬ್‌ಸೈಟ್‌ ನಲ್ಲಿ ವಿದ್ಯಾರ್ಥಿಗಳು ನಿಮ್ಮ ರೋಲ್ ನಂಬರ್, ಜನಿಸಿದ ದಿನಾಂಕದಂತಹ ರುಜುವಾತುಗಳನ್ನು ಬಳಸಿ ಲಾಗಿನ್ ಆಗಿ ನಿಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು .

10ನೇ ತರಗತಿ ಅಥವಾ ICSE ಪರೀಕ್ಷೆಗಳು ಫೆಬ್ರವರಿ 27 ರಂದು ಪ್ರಾರಂಭವಾಗೆ ಮಾರ್ಚ್ 29, 2023 ರಂದು ಕೊನೆಗೊಂಡಿತು. 12ನೇ ತರಗತಿ ಅಥವಾ ISC ಪರೀಕ್ಷೆಯು ಫೆಬ್ರವರಿ 13 ರಂದು ಪ್ರಾರಂಭವಾಗಿ ಕೊನೆಯ ಪರೀಕ್ಷೆ ಮಾರ್ಚ್ 31ರಂದು ನಡೆದಿತ್ತು.

ಈ ವರ್ಷ ಸುಮಾರು 2.5 ಲಕ್ಷ ವಿದ್ಯಾರ್ಥಿಗಳು 10, 12ನೇ ತರಗತಿಯ CISCE ಪರೀಕ್ಷೆಗೆ ಹಾಜರಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!