ಚೀನಾದಲ್ಲಿ ಐಸಿಯು ಭರ್ತಿ, ಚೀನಾದ ಕೋವಿಡ್ ಪರಿಸ್ಥಿತಿ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದಲ್ಲಿ ದಿನವೂ ಹೆಚ್ಚೆಚ್ಚು ಕೊರೋನಾ ಪ್ರಕರಣಗಳು ದಾಖಲಾಗುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಚೀನಾದಲ್ಲಿ ಐಸಿಯುಗಳು ಭರ್ತಿಯಾಗುತ್ತು, ಇಡೀ ವಿಶ್ವಕ್ಕೇ ಕೊರೋನಾ ಕಂಟಕ ಎದುರಾಗಿದೆ. ಅಗತ್ಯ ಕ್ರಮ ಶೀಘ್ರವೇ ಕೈಗೊಳ್ಳುವಂತೆ ಚೀನಾಕ್ಕೆ ಡಬ್ಲೂಎಚ್‌ಒ ಸೂಚಿಸಿದೆ.

ವ್ಯಾಕ್ಸಿನೇಷನ್ ಕೊರತೆ, ಬೂಸ್ಟರ್ ಡೋಸ್ ಕೊರತೆಯಿಂದಾಗಿ ಚೀನಾ ಸಮಸ್ಯೆ ಎದುರಿಸುತ್ತಿದೆ. ಝೀಯೋ ಕೋವಿಡ್ ನೀತಿಯನ್ನು ಚೀನಾ ತೆಗೆದುಹಾಕಿದ್ದೇ ಆದರೆ 13-21 ಲಕ್ಷ ಜನರ ಜೀವಕ್ಕೆ ಕುತ್ತು ಬರಲಿದೆ ಎಂದು ವಿಶ್ಲೇಷಣಾ ಸಂಸ್ಥೆಯೊಂದು ಹೇಳಿದೆ.

ಚೀನಾದಲ್ಲಿ ವೈರಸ್ ಹರಡುವಿಕೆ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಭಾರತದಲ್ಲಿಯೂ ಸೂಕ್ತ ಕ್ರಮ ಜಾರಿಗೊಳಿಸಲಾಗುತ್ತಿದೆ. ಚೀನಾದಲ್ಲಿ ಮತ್ತೆ ಕೊರೋನಾ ಉಲ್ಬಣಿಸಲು ಸರ್ಕಾರ ಎಷ್ಟು ಕಾರಣವೂ ಸಾರ್ವಜನಿಕರ ನಿರ್ಲಕ್ಷ್ಯವೂ ಅಷ್ಟೇ ಕಾರಣ ಎನ್ನಲಾಗಿದೆ.

ವೈದ್ಯಕೀಯ ಸಂಶೋಧನೆಯಲ್ಲಿ ಚೀನಾದ ಲಸಿಕೆ ಅಷ್ಟು ಪರಿಣಾಮಕಾರಿ ಅಲ್ಲ ಎನ್ನುವುದು ಸಾಬೀತಾಗಿದೆ. ಚೀನಾದ ಆಸ್ಪತ್ರೆಗಳಲ್ಲಿ ಐಸಿಯು ವಾರ್ಡ್ ತುಂಬುತ್ತಿದ್ದು, ಚೀನಾ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!