ಇದೆಂಥ ಅನ್ಯಾಯ? ವಿದೇಶಿಗರು ಕದ್ದಿದ್ದ ವಿಗ್ರಹಗಳು ಪಾಕಿಸ್ತಾನಕ್ಕೆ…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಸ್ತುತ ಪಾಕಿಸ್ತಾನದಲ್ಲಿರುವ ಪ್ರದೇಶದಿಂದ ಹಲವು ವರ್ಷಗಳ ಹಿಂದೆ ವಿದೇಶಿಗರಿಂದ ಲೂಟಿ ಮಾಡಲ್ಪಟ್ಟಿದ್ದ ಪ್ರಾಚೀನ ಕಲಾಕೃತಿಗಳನ್ನು ಇದೀಗ ಪಾಕಿಸ್ತಾನಕ್ಕೆ ಮರಳಿಸಲಾಗಿದೆ. ಮ್ಯಾನ್‌ ಹ್ಯಾಟನ್‌ ಜಿಲ್ಲಾ ವಕೀಲರ ಕಚೇರಿಯು ಲೂಟಿ ಮಾಡಲ್ಪಟ್ಟಿದ್ದ ಸುಮಾರು 3.4 ಮಿಲಿಯನ್‌ ಡಾಲರ್‌ ಮೌಲ್ಯದ 192 ಪ್ರಾಚೀನ ಕಲಾಕೃತಿಗಳನ್ನು ಪಾಕಿಸ್ತಾನಕ್ಕೆ ಹಿಂದಿರುಗಿಸಿರುವುದಾಗಿ ಹೇಳಿದೆ. ನ್ಯೂಯಾರ್ಕ್‌ನಲ್ಲಿರುವ ಪಾಕಿಸ್ತಾನ ದೂತಾವಾಸದಲ್ಲಿ ಗುರುವಾರ ನಡೆದ ವಾಪಸಾತಿ ಸಮಾರಂಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯು ಪ್ರಾಚೀನ ವಸ್ತುಗಳನ್ನು ಹಿಂದಿರುಗಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ಹಿಂತಿರುಗಿದ ವಸ್ತುಗಳಲ್ಲಿ “ಮೆಹರ್‌ಗಢ್ ಗೊಂಬೆಗಳು” ಸೇರಿವೆ, ಇದು ವಿಶ್ವದ ಅತ್ಯಂತ ಹಳೆಯ ಮಾನವ ನಿರ್ಮಿತ ಪ್ರತಿಮೆಗಳಾಗಿವೆ. ಬಿಡುಗಡೆಯ ಪ್ರಕಾರ, ಪುರಾತನ ಪ್ರತಿಮೆಗಳನ್ನು ಪಾಕಿಸ್ತಾನದ ನವಶಿಲಾಯುಗದ ಪುರಾತತ್ತ್ವ ಶಾಸ್ತ್ರದ ಸ್ಥಳದಿಂದ ಲೂಟಿ ಮಾಡಲಾಗಿದೆ.

ದುರಂತವೆಂದರೆ ಈ ಎಲ್ಲ ಕಲಾಕೃತಿಗಳೂ ಕೂಡ ಭಾರತ ವಿಭಜನೆಯಾಗುವುದಕ್ಕಿಂತಲೂ ಮುಂಚಿನದು. ಅದು ಕಳುವಾಗಿದ್ದ ಪ್ರದೇಶಗಳೀಗ ಪಾಕಿಸ್ತಾನಕ್ಕೆ ಸೇರಿವೆ. ಆ ಪ್ರದೇಶಗಳೆಲ್ಲವೂ ಒಂದು ಕಾಲದಲ್ಲಿ ಭಾರತಕ್ಕೆ ಸೇರಿದ್ದವು. ಅಲ್ಲದೇ ಹಿಂತಿರುಗಿಸಲ್ಪಟ್ಟ ವಿಗ್ರಹಗಳೆಲ್ಲವೂ ಪ್ರಾಚೀನ ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ಕಲಾಕೃತಿಗಳಾಗಿವೆ. ಅಂತಹ ಕಲಾಕೃತಿಗಳನ್ನೂ ವಿಗ್ರಹಗಳನ್ನೂ ಪ್ರಸ್ತುತ ಆ ಪ್ರದೇಶ ಪಾಕಿಸ್ತಾನದಲ್ಲಿದೆ ಎಂಬ ಕಾರಣಕ್ಕೆ ಇಸ್ಲಾಮಿಕ್‌ ದೇಶವಾದ ಪಾಕಿಸ್ತಾನಕ್ಕೆ ನೀಡಿರುವುದು ಕಳ್ಳನ ಕೈಯಿಂದ ಕಸಿದು ಖದೀಮನ ಕೈಗೆ ನೀಡಿದಂತಾಗಿದೆ.

"Mehrgarh dolls," some of the earliest examples of figurines created by humans, were among the artifacts returned to Pakistan.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!