spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮನೆಯೊಳಗೆ ಹೆಣ್ಣುಮಗುವಿನ ಅಳು ಕೇಳಿದರೆ, ಊರಿನಲ್ಲಿ 111 ಗಿಡ ನೆಡ್ತಾರೆ!

- Advertisement -Nitte

ಮೇಘನಾ ಶೆಟ್ಟಿ, ಶಿವಮೊಗ್ಗ

ಹೆಣ್ಣಿನ ಜೀವನ ಸಂಪೂರ್ಣ ಆಗಬೇಕೆಂದರೆ ಆಕೆ ತಾಯಿಯಾಗಬೇಕು ಅಂತಾರೆ. 170 ದಿನಕ್ಕೂ ಹೆಚ್ಚು ಸಮಯ ಮಗು ತನ್ನೊಳಗೇ ಇದ್ದರೂ ಆಕೆ ಮಗುವಿನ ಸ್ಪರ್ಶಕ್ಕಾಗಿ ಕಾಯುತ್ತಾಳೆ. ತಾಯಿಗಷ್ಟೇ ಅಲ್ಲ, ತಂದೆ, ಅಜ್ಜ,ಅಜ್ಜಿ, ಚಿಕ್ಕಪ್ಪ,ದೊಡ್ಡಪ್ಪ,ಅಣ್ಣ, ಅಕ್ಕ ಅತ್ತೆ ಆಗುವವರಿಗೂ ಅದೇ ಸಂಭ್ರಮ.

ಹಿಂದೆಲ್ಲಾ ಇಂಥದ್ದೇ ಮಗು ಬೇಕು ಅನ್ನೋ ಆಸೆ ಇತ್ತು. ಹೆಣ್ಣು ಮಗು ಮನೆಗೆ ಹೊರೆ ಎನ್ನುವವರೂ ಇದ್ದರು. ಇದೀಗ ಕಾಲ ಬದಲಾಗಿದೆ. ಯಾವ ಮಗುವಾದರೂ ಪರವಾಗಿಲ್ಲ. ಆರೋಗ್ಯವಾಗಿರಲಿ ಎಂದು ಜನ ಆಶಿಸುತ್ತಾರೆ. ಏನೇ ಹೇಳಿ ಈಗಲೂ ಎಷ್ಟೋ ಕಡೆ ನಮಗೆ ಗಂಡು ಮಗು ಬೇಕು ಎನ್ನುವ ಪೋಷಕರು, ಪಾಲಕರು ಇದ್ದಾರೆ.
ಆದರೆ ಈ ಹಳ್ಳಿಯಲ್ಲಿ ಹೆಣ್ಣು ಮಗುವಿನ ಜನನವನ್ನು ಹಬ್ಬದ ರೀತಿ ಸಂಭ್ರಮಿಸುತ್ತಾರೆ. ಊರಿಗೆ ಊರೇ ಸಿಹಿ ಹಂಚೋದಿಲ್ಲ, ಬದಲಿಗೆ ಗಿಡ ನೆಡುತ್ತಾರೆ.

Top 188 Latest And Modern Hindu Baby Girl Names In 2021ಮನೆ ಮುಂದೆ ಒಂದು ಗಿಡ ನೆಟ್ಟು ಸುಮ್ಮನಾಗೋದಿಲ್ಲ ಇಡೀ ಊರಿನಲ್ಲಿ 111 ಗಿಡಗಳನ್ನು ನೆಟ್ಟು ಸಂಭ್ರಮಿಸುತ್ತಾರೆ. ರಾಜಸ್ಥಾನದ ಪಿಪ್ಲಂತ್ರಿ ಗ್ರಾಮದಲ್ಲಿ ಹೆಣ್ಣು ಮಗು ಹುಟ್ಟಿದರೆ, ಊರಲ್ಲಿ ಹಬ್ಬದ ವಾತಾವರಣ. ಈ ಪದ್ಧತಿ ಹೇಗೆ ಬಂತು, ಇದರ ಹಿಂದಿನ ವಿಚಾರ ಏನು? ನೋಡೋಣ ಬನ್ನಿ…

This Amazing Village in India Plants 111 Trees Every Time a Little Girl is Born - One Green Planetಮಕ್ಕಳೇ ಗಿಡಕ್ಕೆ ನೀರು ಹಾಕಿ
ಈ ಹಳ್ಳಿಯ ಜನ ಗಿಡ ನೆಟ್ಟು ನೀರು ಹಾಕದೆ ಸಾಯಿಸೋದಿಲ್ಲ. ಊರಿನ ಎಲ್ಲ ಜನರು ಇದು ನಮ್ಮ ಮರ ಎಂದು ನೀರು ಹಾಕುತ್ತಾರೆ. ಮಕ್ಕಳಿಗೂ ಜವಾಬ್ದಾರಿ ನೀಡಲಾಗುತ್ತದೆ.

Piplantri Village save girls and nature - India The Nation21,000 ಡೆಪಾಸಿಟ್
ಹೆಣ್ಣುಮಕ್ಕಳಿಗೆ ಆರ್ಥಿಕ ಸಮಸ್ಯೆ ಬಾರದಿರಲಿ ಎನ್ನುವ ಕಾರಣಕ್ಕೆ ಯಾರ ಮನೆಯಲ್ಲಿ ಹೆಣ್ಣು ಮಗು ಹುಟ್ಟುತ್ತದೆಯೋ ಅವರು 10 ಸಾವಿರ ರೂ. ನೀಡಬೇಕು. ಜೊತೆಗೆ ಊರಿನವರೆಲ್ಲ ಸೇರಿ 11 ಸಾವಿರ ರೂ. ನೀಡುತ್ತಾರೆ. ಒಟ್ಟಾರೆ 21 ಸಾವಿರ ರೂ. ಹಣವನ್ನು ಬ್ಯಾಂಕ್‌ನಲ್ಲಿ ಡೆಪಾಸಿಟ್ ಮಾಡಲಾಗುತ್ತದೆ. ಹೆಣ್ಣುಮಗು 20 ವರ್ಷದವಳಾದ ನಂತರ ಆ ಹಣ ಬಳಸಬಹುದು.

Celebrating the Girl Child: The Village That Plants 111 Trees Every Time a Girl is Born | IndoreHDಹೆಣ್ಣುಮಕ್ಕಳು ಓದಬೇಕು
ಹೆಣ್ಣುಮಕ್ಕಳನ್ನು ಓದಿಸುವುದು ದೊಡ್ಡ ವಿಷಯ ಅಲ್ಲ ಎನ್ನುವ ರೀತಿ ಎಷ್ಟೋ ಗ್ರಾಮಗಳಲ್ಲಿ ಈಗಲೂ ವರ್ತಿಸುತ್ತಾರೆ. ಹೆಣ್ಣುಮಕ್ಕಳ ಶಿಕ್ಷಣವನ್ನು ಯಾರೂ ಕಿತ್ತುಕೊಳ್ಳಬಾರದು, ಹಣ ಇಲ್ಲ ಎಂದು ಓದು ಸಿಗದೇ ಹೋಗಬಾರದು ಎನ್ನುವ ಕಾರಣಕ್ಕೆ ಈ ರೀತಿ ದುಡ್ಡು ಸಂಗ್ರಹ ಮಾಡಲಾಗುತ್ತದೆ.

This Village in Rajasthan Plants 111 Trees for Every Girl Child Bornಮದುವೆ ಮಾಡುವ ಹಾಗಿಲ್ಲ
ಹೆಣ್ಣು ಮಗು ಹುಟ್ಟಿನ ತಕ್ಷಣ ಆಕೆಯ ಪೋಷಕರ ಬಳಿ ಮದುವೆ ಬಗ್ಗೆ ಮಾತನಾಡಲಾಗುತ್ತದೆ. ಅವಳ ಒಪ್ಪಿಗೆ ಇಲ್ಲದೆ ಮದುವೆ ಮಾಡುವಂತಿಲ್ಲ ಎಂದು ಸಹಿ ಹಾಕುವುದು ಕಡ್ಡಾಯ.

Village plants 111 Trees Everytime a Girl is Born; Piplantri, India, May 2015 - Konflictcamಮುಖ್ಯಸ್ಥರ ಐಡಿಯಾ
ಶ್ಯಾಮ್ ಸುಂದರ್ ಪಲಿವಲ್ ಈ ಗ್ರಾಮದ ಮಾಜಿ ಮುಖ್ಯಸ್ಥ. ತನ್ನ ಮಗಳು ಕಿರಣ್‌ರನ್ನು ಕಳೆದುಕೊಂಡ ಶ್ಯಾಮ್ ಜೀ ಹೆಣ್ಣುಮಕ್ಕಳಿಗಾಗಿ ತಮ್ಮ ಊರಿನಲ್ಲಿ ಈ ರೀತಿ ನೂತನ ವಿಷಯಗಳನ್ನು ಆರಂಭಿಸಿದ್ದಾರೆ.

Piplantri plants 111 trees for birth of every girl child – Village Squareಆಲೋವೆರಾ ಜೆಲ್
ಹಳ್ಳಿಯಲ್ಲಿ ಹೆಚ್ಚು ಮರ ಬೆಳೆಸುವ ಐಡಿಯಾದಿಂದ ಗ್ರಾಮದ ಆರ್ಥಿಕ ಸ್ಥಿತಿ ಕೂಡ ಉತ್ತಮವಾಗಿದೆ. ಈ ಪ್ರದೇಶದಲ್ಲಿ 2.5 ಮಿಲಿಯನ್‌ನಷ್ಟು ಅಲೋವೆರಾ ಗಿಡಗಳಿವೆ. ಅಲೋವೆರಾ ಲೋಳೆಯನ್ನು ಸಂಸ್ಕರಿಸಿ ಜೆಲ್ ಮಾಡುವುದನ್ನು ಕಲಿತಿದ್ದಾರೆ. ಅಲೋವೆರಾ ಜೆಲ್ ಹಾಗೂ ಫ್ರೆಶ್ ಜ್ಯೂಸ್ ತಯಾರಿಸಿ ಮಾರಿ ಹಣ ಸಂಪಾದಿಸುತ್ತಿದ್ದಾರೆ.

Indian village plants 111 trees for every girl born | MiNDFOODಪಿಪ್ಲಂತ್ರಿ ಗ್ರಾಮದ ಬಗ್ಗೆ ನಿಮಗೇನು ಅನಿಸ್ತು? ಹೆಣ್ಣುಮಕ್ಕಳು ಹುಟ್ಟಿದರೆ ಅನಿಷ್ಟ ಎಂದು ಹೀಯಾಳಿಸೋ ಈ ಕಾಲದಲ್ಲೂ ಒಂದು ಪುಟ್ಟ ಗ್ರಾಮದಲ್ಲಿ ಇಷ್ಟೆಲ್ಲಾ ಬದಲಾವಣೆ ಅಂದ್ರೆ ಇದಕ್ಕಿಂತ ಖುಷಿ ಬೇರೆ ಇಲ್ಲ. ಹೆಣ್ಣು ಮಗುವಿಗೂ, ಭೂಮಿತಾಯಿಗೂ ಈ ಹಳ್ಳಿಯಲ್ಲಿ ಅತ್ಯಂತ ಗೌರವ ಇದೆ. ಎಕೋ ಫೆಮಿನಿಸಮ್‌ಗೆ ಒಳ್ಳೆಯ ಉದಾಹರಣೆ ಇದಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss