ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸರಕಾರ ರಚಿಸಿದ ಗಂಟೆಯೊಳಗೆ ಯೋಜನೆ ಜಾರಿ: ರಾಹುಲ್ ಗಾಂಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಬಿಜೆಪಿ ಸರಕಾರದ ಅವಧಿಯಲ್ಲಿ ರಾಜ್ಯದ ಜನರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಅದಕ್ಕಾಗಿ ಬಡವರ, ದುರ್ಬಲ ವರ್ಗದವರ ಏಳಿಗೆಗಾಗಿ ಕಾಂಗ್ರೆಸ್ ಹಲವು ಯೋಜನೆಗಳನ್ನು ರೂಪಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ, ಈಗಾಗಲೇ ಘೋಷಿರುವ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳನ್ನು ಸರಕಾರ ರಚಿಸಿದ ಗಂಟೆಯೊಳಗಾಗಿ ಜಾರಿಗೊಳಿಸುತ್ತೇವೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ಅವರು ಗುರುವಾರ ಉಡುಪಿ ಜಿಲ್ಲೆಯ ಕಾಪುವಿನ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ತೆರೆದ ಸಭಾಂಗಣದಲ್ಲಿ ಅಳವಡಿಸಿದ್ದ ರಾಂಪ್ ನ ಮೇಲೆ ನಡೆದು ಮೀನುಗಾರರ ಜೊತೆ ಸಂವಾದ ನಡೆಸಿದರು.

ಕೆಲವು ವರ್ಷಗಳಿಂದ ಬಿಜೆಪಿ ಸರಕಾರ ರಾಜ್ಯದಲ್ಲಿದೆ. ಆದರೆ ಅದು ನೀವು ಆಯ್ಕೆ ಮಾಡಿದ ಸರಕಾರ ಅಲ್ಲ‌. ಹಣದ ಬಲದಿಂದ ಕಳ್ಳತನ ಮಾಡಿ ರಚಿಸಿದ ಸರಕಾರ ಇದಾಗಿದೆ. ಈ ಸತ್ಯ ರಾಜ್ಯದ ಜನತೆಗೆ ತಿಳಿದಿದೆ‌. ಕೋಟಿ ರೂ. ಗಳನ್ನು ನೀಡಿ ಶಾಸಕರನ್ನು ಖರೀದಿಸಿ ಲೋಕ ತಂತ್ರಕ್ಕೆ ನಷ್ಟ ಮಾಡಿದ್ದಾರೆ ಎಂದರು.

ಬಿಜೆಪಿ ಶಾಸಕರೊಬ್ಬರೇ ಬಿಜೆಪಿಯಲ್ಲಿ ಸಿಎಂ ಹುದ್ದೆಗಾಗಿ 2,500 ಕೋಟಿ ರೂ‌ ನೀಡಬೇಕು ಎಂದು ಆರೋಪಿಸಿದ್ದಾರೆ. ಗುತ್ತಿಗೆದಾರ ಸಂಘದವರು 40% ಕಮಿಷನ್ ವಿರುದ್ದ ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ದಿಂಗಾಲೇಶ್ವರ ಸ್ವಾಮೀಜಿ, ತನ್ನ ಬಳಿಯೂ ಲಂಚಕ್ಕಾಗಿ ಬೇಡಿಕೆ ಇಡಲಾಗಿದ್ದು, ಸ್ವಾಮೀಜಿ ಎಂಬ ಕಾರಣಕ್ಕೆ 40% ಬದಲು 30% ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮಾಜಿ ವಿಧಾನಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ, ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಕೆ.ಸಿ ವೇಣುಗೋಪಾಲ, ಲೋಕಸಭಾ ಸದಸ್ಯ ಪ್ರತಾಪನ್, ಕಾಪು ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ, ಉಡುಪಿ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್, ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ನಟಿ ಭಾವನ, ಕಾರ್ಕಳ ವಿಧಾನಸಭಾ ಕ್ಷೇತ್ರದ ಬಂಡಾಯ ನಾಯಕ ಮಂಜುನಾಥ್ ಪೂಜಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!