ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಇಂಗ್ಲೆಂಡ್ ಪ್ರವಾಸ ತೆರಳುವ ಆಟಗಾರರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಠಿಣ ಸೂಚನೆಯನ್ನು ನೀಡಿದ್ದು, ಆಟಗಾರರು ಕೊರೋನಾ ನಿರ್ಲಕ್ಷಿಸದಂತೆ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದೆ.
ಬ್ರಿಟನ್ ವಿಮಾನ ಏರುವ ಮೊದಲು ಯಾರಿಗಾದರೂ ಪಾಸಿಟಿವ್ ದೃಢಪಟ್ಟರೆ, ಅವರನ್ನು ಇಡೀ ಸರಣಿಯಿಂದ ದೂರ ಇರಿಸಲಾಗುವುದು ಎಂದು ಬಿಸಿಸಿಐ ಎಚ್ಚರಿಸಿದೆ. ಜೊತೆಗೆ ಕುಟುಂಬ ಸದಸ್ಯರನ್ನು ಕೂಡ ಜಾಗೃತೆಯಿಂದ ನೋಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ.
ಐಪಿಎಲ್ ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದರಿಂದ ಬಿಸಿಸಿಐ ಹೆಚ್ಚು ಜಾಗೃತೆ ವಹಿಸಲಿದೆ ಎಂದು ಸಂಬಂಧಿತ ಅಧಿಕಾರಿಗಳು ತಿಳಿಸಿವೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಇಂಗ್ಲೆಂಡ್ ವಿರುದ್ಧದ ಸುದೀರ್ಘ ಫಾರ್ಮಾಟ್ ಗಾಗಿ ಜಂಬೊ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿದೆ.
ಪ್ರಸ್ತುತ ಎಲ್ಲಾ ಆಟಗಾರರು ತಮ್ಮ ಮನೆಗಳಲ್ಲಿದ್ದಾರೆ. ಸರಣಿ ದೀರ್ಘ ಅವಧಿಯಾಗಿರುವ ಕಾರಣ ಐಸೋಲೇಷನ್ ನಂತಹ ನಿರ್ಬಂಧಗಳೊಂದಿಗೆ ಕುಟುಂಬ ಸದಸ್ಯರಿಗೂ ಅನುಮತಿಸಲಾಗಿದೆ. ಮುಂಬೈಗೆ ಆಗಮಿಸಿದ ನಂತರ 14 ದಿನಗಳ ಕ್ವಾರಂಟೈನ್ಗೆ ಒಳಗಾಗಿ ನಂತರ ಆಟಗಾರರು ವಿಮಾನ ಏರಲಿದ್ದಾರೆ.