ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೀನ್ಯಾದ ಶಕಹೊಲ ಅರಣ್ಯದಲ್ಲಿ ನಕಲಿ ಪಾದ್ರಿಯ ಮಾತು ನಂಬಿಕೊಂಡು ಉಪವಾಸ ಮಾಡಿ ಜನರು ಪ್ರಾಣ ಬಿಡುತ್ತಿದ್ದಾರೆ.
ಇದೀಗ ಶಕಹೊಲ ಅರಣ್ಯದಲ್ಲಿ ಮತ್ತೆ 12 ಶವಗಳು ಪತ್ತೆಯಾಗಿದ್ದು, ಒಟ್ಟಾರೆ ಪಾದ್ರಿ ಮಾತನ್ನು ನಂಬಿ ಮೃತಪಟ್ಟವರ ಸಂಖ್ಯೆ 403ಕ್ಕೆ ಏರಿಕೆಯಾಗಿದೆ.
ಪೌಲ್ ಮೆಕೆಂಝಿ ಎಂಬ ನಕಲಿ ಧರ್ಮ ಪ್ರಚಾರಕ ಉಪವಾಸ ಮಾಡಿದರೆ ಏಸು ಒಲಿಯುತ್ತಾನೆ, ಅದರಲ್ಲಿಯೂ ಕಾಡಿನಲ್ಲಿ ಉಪವಾಸ ಮಾಡಿ ಜೀವನ ಕಳೆಯಬೇಕು ಎಂದು ನಂಬಿಸಿ ಕರೆದುಕೊಂಡು ಬಂದು ಉಪವಾಸ ಮಾಡಿಸಿದ್ದಾನೆ. ಇದರಲ್ಲಿ 403 ಮಂದಿ ಹಸಿವಿನಿಂದ ಮೃತಪಟ್ಟಿದ್ದಾರೆ.