Monday, August 15, 2022

Latest Posts

ನಾನು ಕೋಬ್ರಾ, ಒಂದು ಸಲ ಕಚ್ಚಿದರೆ ಸಾಕು: ನಟ ಮಿಥುನ್ ಚಕ್ರವರ್ತಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ನಾನು ಕೋಬ್ರಾ, ಒಂದು ಸಲ ಕಚ್ಚಿದರೆ ಸಾಕು ಎಂದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಹೇಳಿದ್ದಾರೆ.
ಬಿಜೆಪಿ ರ್ಯಾಲಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ನಂತರ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸೇರ್ಪಡೆಯಿಂದ ಬಡವರ ಸೇವೆ ಮಾಡುವ ನನ್ನ ಗುರಿ ಈಡೇರಿದಂತಾಯಿತು ಎಂದರು.
ನಾನೊಬ್ಬ ಅಪ್ಪಟ ಬಂಗಾಳಿ ಮನುಷ್ಯ. ನೀವೆಲ್ಲ ನನ್ನ ಡೈಲಾಗ್​ಗಳನ್ನು ಇಷ್ಟಪಡುತ್ತೀರೆಂಬುದು ಗೊತ್ತು. ನನ್ನ ಹೊಸ ಡೈಲಾಗ್​ ಹೇಳುವೆ ಕೇಳಿ.. ನಾನು ಕಚ್ಚದ ಹಾವೆಂದು ಯಾರೂ ತಿಳಿಯಬೇಡಿ. ನಾನು ನಾಗರ ಹಾವು, ನಾನು ಕಚ್ಚಿದರೆ ನೀವು ಉಳಿಯಲಾರಿರಿ.” ಎಂದು ನೆರೆದ ಜನರಿಗೆ ಸಿನಿಮೀಯ ಸ್ಟೈಲ್​ನಲ್ಲಿ ಡೈಲಾಗ್ ಹೊಡೆದರು.
ಜೀವನದಲ್ಲಿ ಮಹತ್ತರವಾದುದನ್ನು ಮಾಡುವ ಕನಸು ಕಂಡಿದ್ದೆ, ಆದರೆ ಪ್ರಮುಖ ಮುಖಂಡರು, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದ ನಾಯಕ, ಪ್ರಧಾನಿ ನರೇಂದ್ರ ಮೋದಿ ಜೀ ಅವರು ಹಾಜರಿರುವ ವೇದಿಕೆಯಲ್ಲಿ ಇರುವ ಕನಸನ್ನು ಯಾವತ್ತಿಗೂ ಕಂಡಿರಲಿಲ್ಲ ಎಂದರು.
ಇಲ್ಲಿ ಹುಟ್ಟಿದ ಎಲ್ಲರಿಗೂ ಈ ಭೂಮಿಯ ಮೇಲೆ ಅಧಿಕಾರವಿದೆ. ಪಶ್ಚಿಮ ಬಂಗಾಳದಲ್ಲಿರುವ ಪ್ರತಿಯೊಬ್ಬರ ಹಕ್ಕಿಗಾಗಿ ನಾವು ಹೋರಾಡೋಣ ಎಂದು ಕರೆ ನೀಡಿದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss