ನಾನು ಸತ್ತರೆ ಅದಕ್ಕೆ ಕಾರಣ….: ಡೆತ್​ ನೋಟ್​ ಬರೆದ ಶಾಕ್ ಕೊಟ್ಟ ಬಹುಭಾಷಾ ನಟಿ ಪಾಯಲ್​ ಘೋಷ್​!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುಭಾಷಾ ನಟಿ ಪಾಯಲ್​ ಘೋಷ್​ (Payal Ghosh) ಸಾಮಾಜಿಕ ಜಾಲತಾಣದಲ್ಲಿ ಆತ್ಮಹತ್ಯೆಯ ಪತ್ರ (suicide note) ಶೇರ್​ ಮಾಡಿಕೊಂಡು ಸಂಚಲನ ಮೂಡಿಸಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಮಾನಸಿಕ ಆರೋಗ್ಯದ ಕುರಿತು ಮಾತನಾಡಿದ್ದ ನಟಿ, ಈಗ ಆತ್ಮಹತ್ಯೆ ನೋಟ್​ ಬರೆದಿಟ್ಟಿರುವುದರಿಂದ ಎಲ್ಲೆಡೆ ಆತಂಕ ಮನೆಮಾಡಿದೆ.

ಕಳೆದ ವರ್ಷ ಮುಸುಕುಧಾರಿ ದುಷ್ಕರ್ಮಿಗಳ ಗುಂಪೊಂದು ತಮ್ಮ ಮೇಲೆ ಹಲ್ಲೆ ಮಾಡಿ, ಆಸಿಡ್ ದಾಳಿ ನಡೆಸಲು ಪ್ರಯತ್ನಿಸಿದರು ಎಂದು ನಟಿ ಪಾಯಲ್ ಘೋಷ್ ಹೇಳಿದ್ದರು. ಔಷಧಿ ತರುವ ಸಲುವಾಗಿ ರಾತ್ರಿ 10 ಗಂಟೆ ಸುಮಾರಿಗೆ ನಟಿ ಪಾಯಲ್ ಘೋಷ್ ಮನೆಯಿಂದ ಹೊರಗೆ ಬಂದಿದ್ದರು. ಔಷಧಿ ಕೊಂಡುಕೊಂಡು ಕಾರಿನ ಬಳಿ ಬರುವಾಗ ಮುಸುಕುಧಾರಿ ದುಷ್ಕರ್ಮಿಗಳ ಗುಂಪೊಂದು ಪಾಯಲ್ ಘೋಷ್‌ ಮೇಲೆ ಹಲ್ಲೆ ನಡೆಸಿದೆ. ಪಾಯಲ್ ಘೋಷ್ ಕೈಗೆ ರಾಡ್‌ನಿಂದ ಪೆಟ್ಟು ಬಿದ್ದಿದೆ. ಮುಸುಕುಧಾರಿ ದುಷ್ಕರ್ಮಿಗಳ ಕೈಯಲ್ಲಿದ್ದ ಬಾಟಲ್‌ಅನ್ನು ಗಮನಿಸಿದ್ದ ಪಾಯಲ್ ಘೋಷ್, ಅದು ಆಸಿಡ್ ಇರಬಹುದು ಎಂದು ಶಂಕಿಸಲಾಗಿತ್ತು. ಅದರ ಬಳಿಕ ಬಹಳ ಕುಗ್ಗಿ ಹೋಗಿದ್ದ ನಟಿ, ಇದೀಗ ಸ್ಯೂಸೈಡ್​ ನೋಟ್​ (Suicide Note) ಬರೆದಿರುವುದು ಮತ್ತಷ್ಟು ಆತಂಕಕ್ಕೀಡು ಮಾಡಿದೆ.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವಾಗ ಯಾವುದೇ ಶೀರ್ಷಿಕೆಯನ್ನು ಬರೆದಿಲ್ಲ. ಈ ಸೂಸೈಡ್ ನೋಟ್ ಬರೆದಿರುವ ಪೇಪರ್ ಮುಂಬೈನ ತಾಜ್ ಮಹಲ್ ಟವರ್ ಎಂದು ಉಲ್ಲೇಖಗೊಂಡಿದೆ. ಅದರಲ್ಲಿ ಪಾಯಲ್​ ಘೋಷ್​ ಅವರು, ‘ನಾನು ಪಾಯಲ್ ಘೋಷ್, ನಾನು ಆತ್ಮಹತ್ಯೆ ಅಥವಾ ಹೃದಯಾಘಾತದಿಂದ ಸತ್ತರೆ ಅದಕ್ಕೆ ಕಾರಣರಾದವರು…” ಎಂದು ಬರೆದುಕೊಂಡಿದ್ದಾರೆ. ಅವರು ಯಾರ ಹೆಸರನ್ನೂ ಹೇಳಿಲ್ಲ, ಯಾವುದೇ ಸೂಚನೆಯನ್ನೂ ನೀಡಿಲ್ಲ.ನೂರಾರು ಮಂದಿ ಕಮೆಂಟ್​ ಬಾಕ್ಸ್‌ನಲ್ಲಿ (Comment Box) ತಮ್ಮ ಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ.

ಪಾಯಲ್ ಘೋಷ್ ಹಿಂದಿ ಮಾತ್ರವಲ್ಲದೆ ಇಂಗ್ಲಿಷ್, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 2020 ರಲ್ಲಿ, #MeToo ಅಭಿಯಾನದ ಅಡಿಯಲ್ಲಿ, ಅವರು ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ (Anurag Kasyap) ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದಾಗ ಅವರು ಸುದ್ದಿಯಲ್ಲಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!