Tuesday, June 28, 2022

Latest Posts

ಹಿಂಸೆಗೆ ಶರಿಯತ್ ಕಾರಣವಾಗುತ್ತಿದ್ದರೆ ಅದನ್ನು ಬದಲಾಯಿಸುವ ಆಲೋಚನೆ ಮಾಡಬೇಕಿದೆ: ಸಿ.ಟಿ.ರವಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಹಿಂಸೆಗೆ ಶರಿಯತ್ ಕಾರಣವಾಗುತ್ತಿದ್ದರೆ ಅದನ್ನು ಬದಲಾಯಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮುಸ್ಲಿಂ ವಿದ್ವಾಂಸರು ಆಲೋಚಿಸಬೇಕಿದೆ ಎಂದು ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಮಾನವೀಯ ನಡೆಯನ್ನು ಧಾರ್ಮಿಕ ಹಿನ್ನೆಲೆಯಲ್ಲಿ ಸಮರ್ಥಿಸಲು ಮುಂದಾಗಬಾರದು ಇದೊಂದು ಮೃಗೀಯವಾಗಿರುವ ನೀತಿ. ಹಾಗಾಗಿ ಗಂಭಿರವಾಗಿ ಆಲೋಚಿಸಬೇಕೆಂದರು.
ಪ್ರಚೋದನೆಗೆ ಶರಿಯತ್ ಕಾರಣವಾಗುತ್ತಿದ್ದರೆ ಅದನ್ನು ಬದಲಾಯಿಸುವ ನಿಟ್ಟಿನಲ್ಲಿ ನೆಲೆಯಲ್ಲಿ ಆಲೋಚನೆ ಮಾಡಬೇಕಿದೆ. ಅಫ್ಘಾನಿಸ್ಥಾನದಲ್ಲಿ ನಡೆಯುತ್ತಿರುವ ದೌರ್ಜನ್ಯ ಮಹಿಳಾ ವಿರೋಧಿ ನೀತಿ ಮನುಕುಲಕ್ಕೆ ಅಪಮಾನ. ಈ ದುಷ್ಪ್ರೇರಣೆ ಸಂಗತಿಗಳನ್ನು ಬದಲಾಯಿಸಬೇಕು. ಈ ಪ್ರಮಾಣದ ದೌರ್ಜನ್ಯ, ಹಿಂಸೆಯನ್ನು ಯಾರು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಇದು ಕೇವಲ ಅಫ್ಘಾನಿಸ್ಥಾನದ ಸ್ವಂತ ವಿಷಯವೆಂದು ಪರಿಬಾವಿಸಬಾರದು. ಇದು ಆಂತರಿಕ ವಿಷಯವಲ್ಲ ಮನುಕುಲಕ್ಕೆ ಸವಾಲಾಗಿರುವ ಸಂಗತಿ ಹಾಗಾಗಿ ವಿಶ್ವ ಸಂಸ್ಥೆ ಮಧ್ಯ ಪ್ರವೇಶಿಸಬೇಕು. ಮನುಕುಲಕ್ಕೆ ಸವಾಲಾಗುವ ಸಂಗತಿ ಕ್ಯಾನ್ಸರ್ ರೀತಿ ವಿಶ್ವದ ಬೇರೆ ದೇಶಗಳಿಗೆ ಕಾಡುವ ಮುನ್ನ ಕ್ಯಾನ್ಸರ್‍ಗೆ ಅಲ್ಲಿಯೇ ಚಿಕಿತ್ಸೆ ನೀಡಿ ನಿಯಂತ್ರಿಸುವ ಕೆಲಸ ವಾಗಬೇಕು ಎಂದು ಹೇಳಿದರು.
ಇದು ಅಲ್ಲಿಗೆ ನಿಲ್ಲವಂತದ್ದಲ್ಲ ಪ್ರಚೋದನೆ ಕೊಡುವ ಅಂಶಗಳನ್ನು ಬದಲಿಸೊ ವರೆಗೂ ಐಸೀಸ್, ಆಲ್‍ಖೈದಾ, ತಾಲಿಬಾನ್, ಮುಜಾಹಿದ್ದೀನ್ ರೂಪದಲ್ಲಿ ಬರುತ್ತಲೆ ಇರುತ್ತದೆ. ಯಾವ ಕಾರಣಕ್ಕಾಗಿ ಭಯೋತ್ಪಾದನೆ ಮಾಡುತ್ತಿದ್ದಾರೆಂದು ಮುಸ್ಲಿಂ ವಿದ್ವಾಸರು ಚರ್ಚಿಸಿ ಚಿಂತಿಸುವ ಅವಶ್ಯವಿದೆ. ನೋಡಿದರೆ ಕರುಳು ಕಿತ್ತು ಬರುವ ರೀತಿಯಿದೆ ಎಂದರು.
ಮೋದಿ ಹೆಸರಿಟ್ಟರೆ ತಪ್ಪಿಲ್ಲ
ಕಾಂಗ್ರೆಸಿಗರು ಶೌಚಾಲಯಕ್ಕೆ ಮೋದಿ ಹೆಸರಿಡಿ ಎಂದು ವ್ಯಂಗ್ಯವಾಡಿದ್ದಾರೆ. 13 ಕೋಟಿ ಶೌಚಾಲಯ ನಿರ್ಮಿಸೋದು ಕೊಟ್ಯಂತರ ತಾಯಂದಿರ ಮರ್ಯಾದೆ ಉಳಿಸುವುದು ಅಗೌರವದ ಸಂಗತಿ ಎಂದು ನಾವಂತೂ ಬಾವಿಸುವುದಿಲ್ಲ. ಅದೊಂದು ಗೌರವದ ಸಂಗತಿ. ಅದಕ್ಕೆ ಮೋದಿ ಅವರ ಹೆಸರಿಟ್ಟರೆ ಸ್ವಾಗತಿಸುತ್ತೇವೆ ಎಂದರು.
ಕಾಂಗ್ರೆಸ್‍ನಲ್ಲಿ ಪ್ರಮೋಷನ್ ಸಿಗಬೇಕೆಂದರೆ ಅವರು ಜೈಲಿಗೆ ಹೋಗಬೇಕು, ಭ್ರಷ್ಟಾಚಾರ ಮಾಡಬೇಕು ಗೂಂಡಾಗಿರಿಗೆ ವಿಷೇಶ ಆಧ್ಯತೆ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷರೆ ಹೇಳಿದ್ದಾರೆ. ಅವರು ಬೆಳೆದು ಬಂದ ರೀತಿಯನ್ನೆ ಹೇಳುತ್ತಿದ್ದಾರೆ ಮುಂದೆ ಕಾಂಗ್ರೆಸ್ಸಿಗರೆ ಈ ಬಗ್ಗೆ ಯೋಚಿಸಬೇಕು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss