Wednesday, August 10, 2022

Latest Posts

ಒಂದು ವೇಳೆ ಹೀಗೆ ಆದರೆ ಪೆಟ್ರೋಲ್​ ದರ ಆಗುತ್ತೆ 75 ರೂ.!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ಪೆಟ್ರೋಲ್​ ದರವನ್ನು ಜಿಎಸ್​ಟಿ ವ್ಯಾಪ್ತಿಗೆ ತಂದಲ್ಲಿ ಪೆಟ್ರೋಲ್​ ದರ 75 ರೂಪಾಯಿಗೆ ಬರಬಹುದು. ಆದರೆ ಇದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ. ಈ ಇಚ್ಛಾಶಕ್ತಿಯ ಕೊರತೆಯೇ ದೇಶದಲ್ಲಿ ಪೆಟ್ರೋಲ್​ ಹಾಗೂ ಡೀಸೆಲ್​ ದರ ಏರಿಕೆಗೆ ಕಾರಣ ಎಂದು ಎಸ್​ಬಿಐ ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಡೀಸೆಲ್​ ದರ ಪ್ರತಿ ಲೀಟರ್​ಗೆ 68 ರೂಪಾಯಿಗಿಂತ ಕಡಿಮೆ ಹಾಗೂ ಪೆಟ್ರೋಲ್​ ದರ ಪ್ರತಿ ಲೀಟರ್​ಗೆ 75 ರೂಪಾಯಿ ಕಡಿಮೆಗೆ ತಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೇವಲ 1 ಲಕ್ಷ ಕೋಟಿ ರೂಪಾಯಿ ಅಥವಾ 0.4 ಪ್ರತಿಶತ ಜಿಡಿಪಿ ನಷ್ಟ ಹೊಂದಿರಲಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್​​ಗೆ 60 ಡಾಲರ್​ ಹಾಗೂ ವಿನಿಮಯದ ದರ 73 ರೂಪಾಯಿ ಅಂದಾಜಿನಲ್ಲಿ ಇಟ್ಟುಕೊಂಡು ಈ ಲೆಕ್ಕಾಚಾರ ಮಾಡಲಾಗಿದೆ. ಇನ್ನು ಪ್ರಸ್ತುತ ದೇಶದ ಪ್ರತಿಯೊಂದು ರಾಜ್ಯಗಳಲ್ಲಿ ಒಂದೇ ರೀತಿಯಲ್ಲಿ ಇಂಧನ ಬೆಲೆಗಳಿಲ್ಲ. ದೇಶದ ಬಹುತೇಕ ರಾಜ್ಯಗಳಲ್ಲಿ ಪ್ರಸ್ತುತ ಪೆಟ್ರೋಲ್​ ದರ ಪ್ರತಿ ಲೀಟರ್​ಗೆ ನೂರರ ಗಡಿ ದಾಟಿಬಿಟ್ಟಿದೆ.
ಅಂತಿಮ ಬೆಲೆ ಅಂದಾಜುಗಳ ಪ್ರಕಾರ, ಕಚ್ಚಾ ತೈಲದರ ಮತ್ತು ಡಾಲರ್ ದರ, ಡೀಸೆಲ್ ಗೆ 7.25 ರೂ ಮತ್ತು ಡೀಸೆಲ್ ಗೆ 3.82 ರೂ, ಡೀಲರ್ ಕಮಿಷನ್ 2.53 ರೂ, ಪೆಟ್ರೋಲ್ ಗೆ 3.67 ರೂಪಾಯಿ, ಪೆಟ್ರೋಲ್ ಗೆ 30 ರೂಪಾಯಿ ಸೆಸ್, ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮಾನವಾಗಿ ಹಂಚಿಕೆಯಾಗಲಿರುವುದರಿಂದ ಜಿಎಸ್ ಟಿ ಶೇ 28ರಷ್ಟು ಏರಿಕೆಯಾಗಲಿದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
ತೈಲೋತ್ಪನ್ನಗಳನ್ನ ಮಾರಾಟದಿಂದ ಸಿಗುವ ತೆರಿಗೆ / ವ್ಯಾಟ್​ ಪ್ರಮುಖ ಆದಾಯದ ಮೂಲ ಆಗಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಿಎಸ್​ಟಿ ಅಡಿಯಲ್ಲಿ ಕಚ್ಚಾತೈಲಗಳನ್ನ ತರಲು ಒಪ್ಪೋದಿಲ್ಲ. ಈ ಇಚ್ಛಾಶಕ್ತಿ ಕೊರತೆಯೇ ತೈಲೋತ್ಪನ್ನಗಳ ಬೆಲೆ ಏರಿಕೆಗೆ ಕಾರಣ ಎಂದು ಎಸ್​ಬಿಐ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss