ಬೆಂಗಳೂರಿನ ಇತಿಹಾಸ ತಿಳೀಬೇಕಾ? ಹಾಗಿದ್ರೆ ಈ ಬಾರಿ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಬಾರಿ ಗಣರಾಜ್ಯೋತ್ಸವಕ್ಕೆ ಬೆಂಗಳೂರಿನ ಇತಿಹಾಸ ಸಾರುತ್ತಿದೆ ಲಾಲ್‌ಬಾಗ್‌ನ ಫಲಪುಷ್ಪ ಪ್ರದರ್ಶನ..

ಹೌದು, ಈ ಬಾರಿಯ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಬೆಂಗಳೂರಿನ ಇತಿಹಾಸವನ್ನು ಥೀಮ್ ಆಗಿ ನಿರ್ಧರಿಸಲಾಗಿದೆ. ಪ್ರದರ್ಶನದಲ್ಲಿ ಮಾಹಿತಿಯೂ ಇರಲಿ ಎಂದು ತೋಟಗಾರಿಕೆ ಇಲಾಖೆ ನಿರ್ಧರಿಸಿದ್ದು, ಬೆಂಗಳೂರಿನ ಇತಿಹಾಸವನ್ನು ಪ್ರದರ್ಶಿಸಲಾಗುತ್ತದೆ.

1500 ಎಡಿಯಿಂದ ಇತಿಹಾಸ ಆರಂಭಿಸಿ, ರಾಜಮನೆತನಗಳ ಆಳ್ವಿಕೆಯಿಂದ ನಗರ ಬೆಳೆದಿದ್ದು ಹೇಗೆ, ಮುಂದುವರಿದಿದ್ದು ಹೇಗೆ ಎನ್ನುವ ಮಾಹಿತಿ ದೊರೆಯಲಿದೆ. ಕಿಂಗ್ಡಮ್ ವೈಸ್ ಫಲಪುಷ್ಪ ಪ್ರದರ್ಶನ ನಡೆಯಲಿದೆ, ಅಲ್ಲಿ ಅವುಗಳ ಬಗ್ಗೆ ಮಾಹಿತಿಯೂ ಇರಲಿದೆ. ಒಟ್ಟಾರೆ 97ಕ್ಕೂ ಹೆಚ್ಚು ವಿಧದ ನಾನಾ ರಾಜ್ಯಗಳ ಹೂವುಗಳನ್ನು ಬಳಸಿ ಪ್ರದರ್ಶನ ನಡೆಯಲಿದೆ. ಗ್ಲಾಸ್‌ಹೌಸ್ ಹೊರಭಾಗದಲ್ಲಿ ಪ್ರದರ್ಶನದ ಮುಖ್ಯ ಥೀಮ್ ಕಾಣಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!