ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಕೇಂದ್ರ ಸರ್ಕಾರ ತನ್ನ ನೌಕರರಿಗೆ ಸಂಬಳ ಕೊಡಲಾಗದಷ್ಟು ದಿವಾಳಿಯಾಗಿದ್ದರೆ ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲಿ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಂಸ್ಥೆಯ ಕಾರ್ಯಕ್ಷಮತೆಯ ಮೇಲೆ ಕೇಂದ್ರದ ನೌಕರರ ಸಂಬಳ ನಿರ್ಧರಿಸುವುದು ಮೂರ್ಖತನ. ನೌಕರನ ವೈಯಕ್ತಿಕ ಕಾರ್ಯಕ್ಷಮತೆ ಸಂಬಳದ ಮಾನದಂಡವೇ ಹೊರತು ಸಂಸ್ಥೆಯ ಒಟ್ಟಾರೆ ಕಾರ್ಯಕ್ಷಮತೆಯಲ್ಲ. ಒಬ್ಬ ನೌಕರನ ಕಾರ್ಯಕ್ಷಮತೆ ಗರಿಷ್ಟ ಮಟ್ಟದಲ್ಲಿದ್ದು, ಇನ್ಯಾವುದೋ ಕಾರಣದಿಂದ ಸಂಸ್ಥೆಯ ಕಾರ್ಯಕ್ಷಮತೆ ಕುಸಿದರೆ ಆ ನೌಕರನ ಸಂಬಳ ಕಡಿತ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ತನ್ನ ನೌಕರರಿಗೆ ಸಂಬಳ ಕೊಡಲಾಗದಷ್ಟು ದಿವಾಳಿಯಾಗಿದ್ದರೆ ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲಿ. ಇಂತಹ ಹುಚ್ಚು ನಿಯಮಗಳ ಮೂಲಕ ನೌಕರರ ಸಂಬಳಕ್ಕೆ ಕತ್ತರಿ ಹಾಕುವುದು ಬುದ್ದಿ ಭ್ರಮಣೆಯ ಲಕ್ಷಣ. ತಾನು ಕೆಲಸ ಮಾಡುವ ಸಂಸ್ಥೆಯ ವೈಫಲ್ಯಕ್ಕೆ ನೌಕರನ ಸಂಬಳ ಕಡಿತ ಮಾಡುವುದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ ಎಂದು ವ್ಯಂಗ್ಯ ಮಾಡಿದ್ದಾರೆ.
2
ಕೇಂದ್ರ ಸರ್ಕಾರ ತನ್ನ ನೌಕರರಿಗೆ ಸಂಬಳ ಕೊಡಲಾಗದಷ್ಟು ದಿವಾಳಿಯಾಗಿದ್ದರೆ ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲಿ.ಇಂತಹ ಹುಚ್ಚು ನಿಯಮಗಳ ಮೂಲಕ ನೌಕರರ ಸಂಬಳಕ್ಕೆ ಕತ್ತರಿ ಹಾಕುವುದು ಬುದ್ದಿ ಭ್ರಮಣೆಯ ಲಕ್ಷಣ.
ತಾನು ಕೆಲಸ ಮಾಡುವ ಸಂಸ್ಥೆಯ ವೈಫಲ್ಯಕ್ಕೆ ನೌಕರನ ಸಂಬಳ ಕಡಿತ ಮಾಡುವುದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) February 23, 2021