ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆಗೆ ನಡೆಯುತ್ತಿರುವ ಮಾಹಿತಿ ಮಾಲೀಕನಿಗೆ ಅರಿವಿಲ್ಲದಿದ್ದರೆ ಆತ ಅಪರಾಧಿಯಲ್ಲ: ಹೈಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ತಾನು ಬಾಡಿಗೆಗೆ ಮನೆ ನೀಡಿ,ಆ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದರೆ ಅದರ ಅರಿವಿಲ್ಲದಿದ್ದರೆ ಮಾಲೀಕ ಹೊಣೆಯಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಮಹತ್ವದ ಆದೇಶ ನೀಡಿದೆ.
ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆಗೆ ನಡೆಯುತ್ತಿದ್ದು, ಅದರ ಅರಿವಿರದಿದ್ದರೆ ಮಾಲೀಕ ಅಪರಾಧಿಯಾಗುವುದಿಲ್ಲ. ಆದ್ರೆ ಮಾಲೀಕನಿಗೆ ಈ ಬಗ್ಗೆ ಮೊದಲೇ ಗೊತ್ತಿದ್ದರೆ ಮಾತ್ರ ಆತ ಹೊಣೆಗಾರನಾಗುತ್ತಾನೆ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.
ಬೆಂಗಳೂರಿನ ನಾಗರಭಾವಿಯ‌ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಸಿಕ್ಕ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಮಾಲೀಕ ಪ್ರಭುರಾಜ್ ಮೇಲೂ ಕೇಸ್ ದಾಖಲಿಸಿದ್ದರು. ಹಾಗಾಗಿ ಮಾಲೀಕ ಬಾಡಿಗೆ ಕರಾರಿನ ಪತ್ರ ಹಾಜರುಪಡಿಸಿದ್ದರು. ಸದರಿ ಕಟ್ಟಡದಲ್ಲಿ ತಾನು ವಾಸವಾಗಿಲ್ಲವೆಂದು ಉತ್ತರ ನೀಡಿದ್ದರು. ವೇಶ್ಯಾವಾಟಿಕೆಯ ಅರಿವಿರಲಿಲ್ಲವೆಂದು ಪೊಲೀಸರಿಗೆ ಉತ್ತರಿಸಿದ್ದರು.
ತಾನು ಬೇರೆಡೆ ನೆಲೆಸಿರುವುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿತ್ತು. ಆದರೂ ಪೊಲೀಸರು ಆರೋಪ ಪಟ್ಟಿ ದಾಖಲಿಸಿದ್ದರು. ಹೀಗಾಗಿ ಪ್ರಕರಣ ರದ್ದುಪಡಿಸಲು ಕೋರಿ ಹೈಕೋರ್ಟ್ ಗೆ ಆತ ಅರ್ಜಿ ಸಲ್ಲಿಸಿದ್ದ. ಹೈಕೋರ್ಟ್ ಮಾಲೀಕನ ವಿರುದ್ಧದ ಕೇಸ್ ರದ್ದುಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!