Friday, August 12, 2022

Latest Posts

ಪ್ರಭುತ್ವ ಕೆಟ್ಟಿದೆ ಎಂದರೆ ಜನರು ಸುಮ್ಮನೆ ಕುಳಿತುಕೊಳ್ಳಬಾರದು: ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ

ಹೊಸದಿಗಂತ ವರದಿ, ಮೈಸೂರು:

ಭಾರತ ದೇಶದ ರಾಜಕಾರಣ ಧರ್ಮ ಮತ್ತು ಜಾತಿ ಆಧಾರದಲ್ಲಿ ನಡೆಯುತ್ತಿದೆ. ಪ್ರಭುತ್ವ ಕೆಟ್ಟಿದೆ ಎಂದರೆ ಜನರು ಸುಮ್ಮನೆ ಕುಳಿತುಕೊಳ್ಳಬಾರದು. ಚಾಟಿ ಎತ್ತಲೇ ಬೇಕು. ಇಲ್ಲದಿದ್ದರೆ ಪ್ರಜಾಪ್ರಭುತ್ವ ವಿಫಲವಾಗುತ್ತದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಶನಿವಾರ ಮೈಸೂರಿನ ಮಾನಸ ಗಂಗೋತ್ರಿಯಲ್ಲಿರುವ ಬಿ.ಎಂ.ಶ್ರೀ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ರಾಜ್ಯಶಾಸ್ತç ಅಧ್ಯಯನ ವಿಭಾಗ, ಶ್ರೀ ಎನ್.ರಾಚಯ್ಯ ಅಧ್ಯಯನ ಪೀಠದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ `ದಲಿತ ಚಳವಳಿ ಮತ್ತು ರೈತ ಚಳವಳಿ ಒಂದು ಮುಖಾಮುಖಿ’ ಎಂಬ ವಿಷಯದ ಕುರಿತು ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಮತ್ತು `ಶ್ರೀ ಎನ್. ರಾಚಯ್ಯ ಶತಮಾನೋತ್ಸವ ಸ್ಮರಣ ಸಂಚಿಕೆ ಬಿಡುಗಡೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,

ಪ್ರಸ್ತುತ ದಿನಗಳಲ್ಲಿ ದೇಶದ ಮೂಲ ನಿವಾಸಿಗಳಿಗೆ ಧ್ವನಿ ಇಲ್ಲದಂತಾಗಿದೆ ಎಂದು ಇಂದು ಯಾರಾದರೂ ಸರ್ಕಾರದ ವಿರುದ್ಧ ಮಾತನಾಡಿದರೆ, ಸರ್ಕಾರವನ್ನು ಪ್ರಶ್ನೆ ಮಾಡಿದರೆ ಅವರ ಮೇಲೆ ಪ್ರಕರಣ ದಾಖಲಿಸುತ್ತಾರೆ. ಇದೇ ಇವತ್ತಿನ ರಾಜಕೀಯ ಶಸ್ತಾçಸ್ತçವಾಗಿದೆ. ಇಂದು ರಾಜಕೀಯ ನಾಯಕರು ಸಂವಿಧಾನದ ಸಿದ್ಧಾಂತದ ವಿರುದ್ಧವಾಗಿದ್ದಾರೆ ಎಂದು ಕಿಡಿಕಾರಿದರು. ಬೇವಿನ ಮರವನ್ನು ಬಿತ್ತಿ ಮಾವಿನ ಹಣ್ಣು ಕೇಳಿದರೆ ಬರಲು ಸಾಧ್ಯವಿಲ್ಲ. ಇದೇ ಪ್ರಸ್ತುತ ರಾಜಕೀಯ ಪರಿಸ್ಥಿತಿ ಎಂದು ಬೇಸರ ವ್ಯಕ್ತಪಡಿಸಿದರು.

ಅಹಿಂದ ಮಾತನಾಡಬೇಡಿ ಎನ್ನುವವರು, ಯಾವುದೋ ಧರ್ಮದ ಹೆಸರಿನಲ್ಲಿ, ಉಳಿದವರ ಮೇಲೆ ಆಡಳಿತ ನಡೆಸುತ್ತಿದ್ದಾರೆ. ಸರ್ಕಾರ ಹಿಡನ್ ಅಜೆಂಡಾ ಈಡೇರಿಸುತ್ತಿದೆ. ನಿಮ್ಮನ್ನು ಏನೂ ಕೇಳುವುದಿಲ್ಲ. ಹೀಗೆ ಆದರೆ ಪ್ರಜಾಪ್ರಭುತ್ವದ ಮುಂದಿನ ಭವಿಷ್ಯವೇನು? ಎಂದು ಆತಂಕ ವ್ಯಕ್ತಪಡಿಸಿದರಲ್ಲದೆ, ಸರ್ವಾಧಿಕಾರಿ ನಿಯಮ ದೇಶದಲ್ಲಿ ಪ್ರಾರಂಭವಾಗಿದೆ. ಇದರಿಂದ ಧರ್ಮ ಮತ್ತು ಜಾತಿ ಪದ್ಧತಿಯಿಂದ ಕಷ್ಟಪಟ್ಟು ಪಡೆದಿರುವ ಸ್ವಾತಂತ್ರ್ಯ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಅವರ ಒಡನಾಟದಿಂದ ರಾಚಯ್ಯ ಅವರು ಸ್ವಾತಂತ್ರ್ಯ ಸಂಗ್ರಾಮದ ಹೋರಾಟ, ಗುಲಾಮಗಿರಿ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದರು. ರಾಚಯ್ಯ ಮತ್ತು ಬಸವಯ್ಯ ಈ ಇಬ್ಬರು ಬಡವರ ಧ್ವನಿಯಾಗಿದ್ದರು. ಯಾರ ಮುಲಾಜಿಗೂ ಒಳಗಾಗುತ್ತಿರಲಿಲ್ಲ. ಮುಖ್ಯಮಂತ್ರಿಗಳ ವಿರುದ್ದವಾಗಿಯೇ ಅವಿಶ್ವಾಸ ನಿರ್ಣಯ ಮಾಡಲು ಸಿದ್ಧರಿದ್ದರು ಎಂದು ಹೇಳಿದರು.

ಕೃತಿಯನ್ನು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಬಿಡುಗಡೆಗೊಳಿಸಿದರು. ಕೃತಿ ಕುರಿತು ನಿವೃತ್ತ ರಾಜ್ಯ ಮಾಹಿತಿ ಆಯುಕ್ತರು ಮಾತನಾಡಿದರು. ಮೈಸೂರು ವಿವಿ ರಾಜ್ಯಶಾಸ್ತç ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಮುಜಾಫರ್ ಅಸ್ಸಾದಿ, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನ, ಶ್ರೀ ಎನ್.ರಾಚಯ್ಯ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಎಚ್.ಬಿ.ಮಲ್ಲಿಕಾರ್ಜುನಸ್ವಾಮಿ, ರಾಜ್ಯಶಾಸ್ತç ಅಧ್ಯಯನ ವಿಭಾಗದ ಪ್ರೊ.ಜಿ.ಟಿ.ರಾಮಚಂದ್ರಪ್ಪ, ಪ್ರೊ.ಕೃಷ್ಣ ಹೊಂಬಳ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss