ನಾಲ್ಕಕ್ಕಿಂತ ಹೆಚ್ಚು ಮಕ್ಕಳಿದ್ದರೆ ಈ ರಾಜ್ಯದಲ್ಲಿ ಸರ್ಕಾರದ ಸೌಲಭ್ಯ ಕಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಣಿಪುರದಲ್ಲಿ ಜನಸಂಖ್ಯಾ ನಿಯಂತ್ರಣ ಕಾಯ್ದಿಗೆ ಸುಗ್ರಿವಾಜ್ಞೆ ಮೂಲಕ ಅನುಮೋದನೆ ನೀಡಲಾಗಿದೆ. ಒಂದು ಕುಟಂಬ ನಾಲ್ಕಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಆ ಕುಟುಂಬದ ಯಾವುದೇ ಸದಸ್ಯರಿಗ ಸರ್ಕಾರಿ ಸೌಲಭ್ಯ ಹಾಗೂ ಪ್ರಯೋಜನಗಳು ಲಭ್ಯವಿಲ್ಲ ಎಂದು ಸರ್ಕಾರ ಘೋಷಿಸಿದೆ.
ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ನೇತೃತ್ವದ ರಾಜ್ಯ ಕ್ಯಾಬಿನೆಟ್ ಸುಗ್ರಿವಾಜ್ಞೆ ಮೂಲಕ ಈ ಕಾಯ್ದೆಗೆ ಅನುಮೋದನೆ ನೀಡಿದೆ.
ಮಣಿಪುರ ರಾಜ್ಯ ಜನಸಂಖ್ಯಾ ಆಯೋಗದ ಅಡಿಯಲ್ಲಿ ಈ ನೀತಿ ಜಾರಿಗೆ ಬಂದ ಬಳಿಕ ಯಾವುದೇ ದಂಪತಿ ನಾಲ್ಕು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ, ಆ ಕುಟುಂಬದ ಯಾವುದೇ ಸದಸ್ಯರಿಗೆ ಸರ್ಕಾರಿ ಸೌಲಭ್ಯಗಳು ಇರುವುದಿಲ್ಲ.
2001ರ ಜನಗಣತಿಯಲ್ಲಿ ಅಸ್ಸಾಂ ಜನಸಂಖ್ಯೆ 22.93 ಲಕ್ಷ ಆಗಿತ್ತು. 2011ರ ಜನಗಣತಿಯಲ್ಲಿ ಈ ಸಂಖ್ಯೆ 28.56 ಲಕ್ಷಕ್ಕೆ ಏರಿಕೆಯಾಗಿದೆ. ಇನ್ನು ಜನಸಂಖ್ಯಾ ಅಸಮತೋಲನವನ್ನು ಹೋಗಲಾಡಿಸಲು ಹಾಗೂ ಭವಿಷ್ಯದಲ್ಲಿ ಎದುರಾಗುವ ಅಪಾಯ ತಪ್ಪಿಸಲು ಜನಸಂಖ್ಯಾ ನಿಯಂತ್ರಣ ಕಾನೂನು ಅತ್ಯವಶ್ಯಕ ಎಂದು ಮಣಿಪುರ ಸರ್ಕಾರ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!