MUST READ | ಗಂಡ-ಹೆಂಡತಿಯ ಸಂಬಂಧದಲ್ಲಿ ಸತ್ವ ಉಳಿದಿಲ್ಲ ಎಂದಾದರೆ ಅವರು ಈ ರೀತಿ ನಡೆದುಕೊಳ್ಳುತ್ತಾರೆ..

ಹೇಗಿದೆ ನಿಮ್ಮ ವೈವಾಹಿಕ ಜೀವನ? ಇಬ್ಬರೂ ಸಂತೋಷವಾಗಿದ್ದೀರಾ? ಪ್ರೀತಿ ಇನ್ನೂ ಜೀವಂತವಾಗಿದೆಯಾ? ಕೆಲವೊಮ್ಮೆ ಏನು ಮಾಡಿದರೂ ಸಂಬಂಧಗಳನ್ನು ಉಳಿಸಿಕೊಳ್ಳೋದಕ್ಕೆ ಆಗೋದಿಲ್ಲ. ಒಬ್ಬರೇ ಸಂಬಂಧ ನಿಭಾಯಿಸಿದರೆ ಅದು ಹೊಂದಾಣಿಕೆಯ ಜೀವನ ಆಗುತ್ತದೆ ಅಷ್ಟೆ. ನಿಮ್ಮ ಸಂಬಂಧದಲ್ಲಿ ಸತ್ವ ಇಲ್ಲ ಎಂದು ಹೀಗೆ ತಿಳಿಯಿರಿ..

  • ಎಲ್ಲ ವಿಷಯದಲ್ಲಿಯೂ ನಿಮ್ಮ ಮಾತನ್ನು ಅವರು ತಿರಸ್ಕರಿಸುತ್ತಾರೆ.
  • ನಿಮ್ಮ ಬಗ್ಗೆಯೇ ನಿಮಗೆ ಬೇಸರ ಹುಟ್ಟುವಂತೆ ಮಾತನಾಡುತ್ತಾರೆ.
  • ನಿಮ್ಮ ಸಂಗಾತಿ ನಿಮ್ಮನ್ನು ಕಂಟ್ರೋಲ್ ಮಾಡುತ್ತಿದ್ದಾರೆ ಎನಿಸುತ್ತದೆ.
  • ಮನೆಯವರು ಏನಂತಾರೆ, ಕುಟುಂಬಕ್ಕೆ ಕೆಟ್ಟ ಹೆಸರು ಎನ್ನುವ ಒಂದೇ ಕಾರಣಕ್ಕೆ ಅವರ ಜೊತೆ ಇದ್ದೀರಿ.
  • ಮಕ್ಕಳಿಗಾಗಿ ಮಾತ್ರ ಜೊತೆಯಾಗಿದ್ದೀರಿ.
  • ಬೇರೆಯವರ ಜೊತೆ ಎಮೋಷನಲ್ ಅಫೇರ್ ಇರಬಹುದು.
  • ವಾದ ಮಾಡುವುದನ್ನೇ ಬಿಟ್ಟಿದ್ದೀರಿ
  • ನಿಮ್ಮ ಬಾಡಿ ಲಾಂಗ್ವೇಜ್‌ನಲ್ಲಿ ಆಸಕ್ತಿ ಇಲ್ಲದಿರುವುದು ಎದ್ದು ಕಾಣುತ್ತದೆ.
  • ಅವರ ಇಷ್ಟ ಕಷ್ಟಗಳ ಬಗ್ಗೆ ಯೋಚಿಸುವುದಿಲ್ಲ.
  • ನೀವು ಮಾಡುವ ಎಲ್ಲ ಕೆಲಸದಲ್ಲಿಯೂ ಅವರು ತಪ್ಪು ಹುಡುಕುತ್ತಾರೆ ಅಥವಾ ತಪ್ಪು ಕಾಣುತ್ತದೆ.
  • ದೃಷ್ಟಿ ಇಟ್ಟು ಮಾತನಾಡುವುದನ್ನೇ ನಿಲ್ಲಿಸಿದ್ದೀರಿ.
  • ದೈಹಿಕ ಸ್ಪರ್ಶ ಇಷ್ಟವಾಗುವುದಿಲ್ಲ.
  • ಇಬ್ಬರೂ ಇಬ್ಬರನ್ನು ಅವಾಯ್ಡ್ ಮಾಡುತ್ತೀರಿ.
    (ಈ ಎಲ್ಲ ಲಕ್ಷಣಗಳನ್ನು ಅಂತರ್ಜಾಲ ಆಧರಿಸಿ ಬರೆಯಲಾಗಿದೆ)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!