ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮಲ್ಲಿ ನೀರು ಇದ್ದಿದ್ದರೆ ಬಿಡಬಹುದಿತ್ತು, ನಮ್ಮಲ್ಲೇ ನೀರಿಲ್ಲ, ಇನ್ನೇನು ಸ್ವಲ್ಪ ದಿನದಲ್ಲಿ ಬೆಂಗಳೂರಿಗೂ ನೀರಿನ ಸಮಸ್ಯೆ ಆಗಲಿದೆ. ಸುಪ್ರೀಂ ತೀರ್ಪು ದುರದೃಷ್ಟಕರ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಈಗಲೂ ತಡವಾಗಿಲ್ಲ. ಕೇಂದ್ರ ಸರ್ಕಾರ ತಜ್ಞರ ತಂಡವನ್ನು ಕಳಿಸಿ ಎಲ್ಲಾ ಸ್ಥಿತಿಗತಿ ಬಗ್ಗೆ ಅವಲೋಕನ ಮಾಡಲಿ, ನೀರು ಬಿಡುವ ಆದೇಶ ಮರುಪರಿಶೀಲನೆ ಆಗಬೇಕು. ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು. ಪರಿಶೀಲನೆ ಆಗುವವರೆಗೂ ನೀರನ್ನು ತಡೆ ಹಿರಿಯಬೇಕು ಎಂದಿದ್ದಾರೆ.
ರಾಜಕೀಯ ಮರೆತು ಎಲ್ಲರೂ ಕೇಂದ್ರಕ್ಕೆ ಮನವಿ ಮಾಡಬೇಕು. ಪ್ರಧಾನಿ ಅವರಿಗೆ ಈ ಬಗೆಗಿನ ಸಂಪೂರ್ಣ ಮಾಹಿತಿ ನೀಡಿ ಸಹಾಯಕ್ಕೆ ಕೇಳಬೇಕು ಎಂದಿದ್ದಾರೆ.