ಹೊಸ ದಿಗಂತ ವರದಿ ವಿಜಯಪುರ:
ಯಾರಾದರೂ ಸಂತ್ರಸ್ತರು ನನ್ನ ಬಳಿ ಬಂದಾಗ ನಿಜವಾಗಿ ಸಂತ್ರಸ್ತರಾಗಿದ್ದರೆ ಅವರಿಗೆ ನೈತಿಕ ಬೆಂಬಲ, ಕಾನೂನು ರೀತಿಯ ರಕ್ಷಣೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ನನ್ನ ಹೇಳಿಕೆಗೆ ಬದ್ದನಿದ್ದೇನೆ. ನನ್ನ ಬಳಿ ಹಲವರ ಸಿಡಿ ಇದೆ ಎಂದು ಹೇಳಿದ್ದೇನೆ ಎಂದರು.
ಅಲ್ಲದೆ ಮಾನವ ಹಕ್ಕುಗಳ ಸಂಘಟನೆ ಇಂದಿರಾ ಎನ್ನುವರು ನನ್ನ ಇತಿಹಾಸ ತಿಳಿಯದೆ ಮಾನ ಹಾನಿ ಮಾಡಿದರೆ. ಈ ಕುರಿತು ಮಾನನಷ್ಟ ಮೊಕದ್ದಮೆ ದಾಖಲಿಸುವೆ. ಈಗಾಗಲೇ ನಮ್ಮ ವಕೀಲರಿಗೆ ಇಂದಿರಾ ಅವರಿಗೆ ನೋಟಿಸ್ ನೀಡುವಂತೆ ಸೂಚಿಸಿದ್ದೆನೆ. ಇಂದಿರಾ ಅವರು ಬಹಿರಂಗವಾಗಿ ಮಾಧ್ಯಮದಲ್ಲಿ ಕ್ಷಮೆ ಕೇಳಬೇಕು, ಕೇಳದಿದ್ದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸುವೆ ಎಂದು ಎಚ್ಚರಿಕೆ ನೀಡಿದ್ದಾರೆ.