Friday, July 1, 2022

Latest Posts

ಯಡಿಯೂರಪ್ಪರನ್ನು ಬದಲಾಯಿಸಿದರೆ ಭಾಜಪಗೆ ಬಹುದೊಡ್ಡ ಪೆಟ್ಟು ಬೀಳಲಿದೆ: ಎನ್.ತಿಪ್ಪಣ್ಣ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ಬಳ್ಳಾರಿ:

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಏನು ತಪ್ಪು‌ಮಾಡಿದ್ದಾರೆ ಎಂದು ಸಿ.ಎಂ. ಹುದ್ದೆಯಿಂದ ಬದಲಾಯಿಸಲಾಗುತ್ತಿದೆ ಎಂಬುದು ತಿಳಿಯದಾಗಿದೆ, ಒಂದು ವೇಳೆ ವರೀಷ್ಠರು ಹಟಕ್ಕೆ ಬಿದ್ದು ಬದಲಾವಣೆ ಮಾಡಿದರೆ ಬರುವ ದಿನಗಳಲ್ಲಿ ಭಾಜಪಾಗೆ ಬಹುದೊಡ್ಡ ಪೆಟ್ಟು ಬೀಳಲಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ ಅವರು ಹೇಳಿದರು.
ನಗರದ ಕೊಟ್ಟೂರೇಶ್ವರ ಸ್ವಾಮೀ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ‌ಮಾತನಾಡಿದರು. ದಕ್ಷಿಣ ಭಾರತದಲ್ಲೇ ರಾಜ್ಯದಲ್ಲಿ ಮೊದಲ ಬಾರಿಗೆ ಭಾಜಪಾ ಅಧಿಕಾರಕ್ಕೆ ಬಂದಿದ್ದು, ಯಡಿಯೂರಪ್ಪ ಹಾಗೂ ವಿವಿಧ ನಾಯಕರಿಂದ ಎನ್ನುವುದನ್ನು ಪಕ್ಷದ ವರೀಷ್ಠರು ‌ಮರೆಯಕೂಡದು. ಅವದಿಯಲ್ಲಿ ಇಡೀ ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಅನೇಕ ಕೆಲಸಗಳನ್ನು ಮಾಡಿದ್ದು, ಇದರ ಜೊತೆಗೆ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವಲ್ಲಿ ಯಡಿಯೂರಪ್ಪ ಅವರು ಶ್ರಮಿಸಿದ್ದಾರೆ. ಹೀಗಿರುವಾಗ ಅಂತಹ ನಾಯಕರನ್ನು ಕಾರಣವಿಲ್ಲದೇ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವುದು ಸರಿಯಲ್ಲ, ಇದರ ಹಿಂದೆ ದೊಡ್ಡ ಶಡ್ಯಂತ್ರ ಅಡಗಿದೆ. ಕೋವಿಡ್-19 ನಂತಹ ಸಂಕಷ್ಟದ ಸ್ಥಿತಿಯಲ್ಲಿ ನಾಯಕತ್ವ ಬದಲಾವಣೆ ಪ್ರಸ್ತಾಪ ಯಾಕೇ ಆಗ್ತಿದೆ ತಿಳಿಯದಾಗಿದೆ. ಬಿ.ಎಸ್.ವೈ ಅವರನ್ನು ಕೆಳಗಿಳಿಸಬೇಕು, ಬೇರೆ ಯಾರನ್ನೋ ಕರೆತರಬೇಕು ಎಂದು ಬಹಳ ದಿನಗಳಿಂದ ನಡಿತಿದೆ. ಇಡೀ ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಕೆಲಸ ಮಾಡಿದ್ದರೂ ನಾಯಕತ್ವ ಬದಲಾವಣೆ ಕೂಗು ಕೇಳಿ ಬರುತ್ತಿದೆ. ಪಕ್ಷದ ವರೀಷ್ಠರು ಆಲೋಚಿಸಿ ಹೆಜ್ಜೆ ಇಡಬೇಕು, ಬದಲಾವಣೆ ಆಗಿದ್ದೇ ಆದರೇ, ಬರುವ ದಿನಗಳಲ್ಲಿ ಪಕ್ಷಕ್ಕೆ ಹೊಡೆತ ಬೀಳಲಿದೆ, ಭಾಜಪ ಮತ್ತೆ ಬರುವ ದಿನಗಳಲ್ಲಿ ಅಧಿಕಾರಕ್ಕೆ‌ ಬರುವುದು ಕಷ್ಟವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೀರಶೈವ, ಲಿಂಗಾಯತ ಜಾತಿ ಅಲ್ಲ, ಅದೊಂದು ಧರ್ಮ, ಇದಕ್ಕೆ ಯಾರಬೇಕಾದರೂ ಬರಬಹುದು. ವೀರಶೈವ ಧರ್ಮಕ್ಕೆ ಅನ್ಯಾಯವಾಗದಂತೆ ತಡೆಯಲು ಮಹಾಸಭಾ ವಿದೆ ಎಂದರು. ಬಿ.ಎಸ್.ವೈ.ಅವರಿಗೆ ವಯಸ್ಸಾಗಿದೆ ಎನ್ನುವದಾದರೇ ಮುಖ್ಯಮಂತ್ರಿಯನ್ನು ಮಾಡುವಾಗ ವರೀಷ್ಠರಿಗೆ ತಿಳಿಯಲಿಲ್ಲವೇ, ಮುಖ್ಯಮಂತ್ರಿ ‌ಮಾಡುವಾಗ ಬಾರದ ವಯಸ್ಸಿನ ಅಡ್ಡಿ ಈಗೇಕೆ ಮುನ್ನೆಲೆಗೆ ಬಂದಿದೆ. ಯಾವುದೇ ಕಾರಣಕ್ಕೂ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಬಾರದು, ಅವದಿ ಪೂರ್ಣ ಅವರೇ‌ ಮುಂದು ಬರೆಯಬೇಕು, ರಾಜೀನಾಮೆ ‌ನೀಡುವಂತೆ ಒತ್ತಾಯಿಸಕೂಡದು. ಹುದ್ದೆಯಿಂದ ಕೆಳಗಿಳಿಸಿದರೇ ಇದು ವೀರಶೈವ ಧರ್ಮದವರಿಗೆ ಮಾಡಿದ ಮೋಸ ಅಲ್ಲ, ಎಲ್ಲ ಧರ್ಮದವರಿಗೂ ಮೋಸ ಮಾಡಿದಂತಾಗಲಿದೆ . ಕೈ ನಾಯಕ ಶ್ಯಾಮನೂರು ಶಿವಶಂಕ್ರಪ್ಪ ಅವರೂ ಕೂಡಾ ಯಡಿಯೂರಪ್ಪ ಅವರೆ ಮುಂದುವರೆಯಲಿ ಎಂದು ಹೇಳಿದ್ದಾರೆ, ಬಸವನಗೌಡ ಯತ್ನಾಳ ಯಾವ ಬ್ರಮೆಯಲ್ಲಿದ್ದಾರೋ ಗೊತ್ತಿಲ್ಲ, ಬಾಯಿಗೆ ಬಂದಿದ್ದನ್ನೇ ಹೇಳುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ‌ಮಹಾಸಭಾದ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್ ಮಾತನಾಡಿದರು. ಮುಖಂಡರಾದ ಬಸವರಾಜ್, ವಿರುಪಾಕ್ಷಪ್ಪ, ಚೆನ್ನಬಸವ, ರುದ್ರಯ್ಯ ಸ್ವಾಮೀ, ಗಂಗಾವತಿ ವೀರೇಶ್, ಹೇಮರೆಡ್ಡಿ ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss