ಈ ಒಂದು ಪ್ರಶ್ನೆಗೆ ಉತ್ತರಿಸಿದರೆ 99 ಅಂಕ ಪಕ್ಕಾ ಎಂದ್ರು ಪ್ರಿನ್ಸಿಪಾಲ್!

ನಾಲ್ವರು ಆಪ್ತ ಸ್ನೇಹಿತರು ಖುಷಿಯಲ್ಲಿ ಪಾರ್ಟಿ ಮಾಡ್ತಾ ಇದ್ರು. ಪಾರ್ಟಿ ಶುರುವಾದ ಒಂದು ಗಂಟೆ ನಂತರ ಗೊತ್ತಾಯ್ತು ನಾಳೆ ಪರೀಕ್ಷೆ ಇದೆ ಅಂತ. ಪರೀಕ್ಷೆ ಬಗ್ಗೆ ತಲೆಕೆಡಿಸಿಕೊಂಡು ಓದುತ್ತಾ ಕೂರೋ ಸ್ಟೂಡೆಂಟ್ಸ್ ಇವರಾಗಿರಲಿಲ್ಲ. ಹಾಗಾಗಿ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ, ಆಮೇಲಿನದ್ದು ಆಮೇಲೆ ನೋಡ್ಕೊಂಡ್ರೆ ಆಯ್ತು ಅಂತ ಪಾರ್ಟಿ ಮುಂದುವರಿಸಿದ್ರು.

ಪಾರ್ಟಿ ಎಲ್ಲ ಮುಗಿದಮೇಲೆ ಒಬ್ಬ ಸ್ನೇಹಿತ ಹೇಳಿದ, ನಾಳೆ ಪರೀಕ್ಷೆ ತಪ್ಪಿಸಿಕೊಳ್ಳೋದಕ್ಕೆ ಐಡಿಯಾ ಮಾಡಬೇಕು ಅಂತ. ಎಲ್ಲ ಸೇರಿ ಐಡಿಯಾ ಒಂದನ್ನು ಮಾಡಿದರು. ಮೈತುಂಬಾ ಕೆಸರು, ಕೊಚ್ಚೆ, ಧೂಳು ಆಗೋ ರೀತಿ ಮಾಡಿಕೊಂಡು, ಬೆಳಗ್ಗೆ ಸೀದ ಎದ್ದು ಪ್ರಿನ್ಸಿಪಾಲ್ ಬಳಿ ಅದೇ ಬಟ್ಟೆಯಲ್ಲಿ ಹೋದ್ರು.

ಸರ್ ನಾವು ಒಳಗೆ ಬರ‍್ಬೋದಾ? ನೆನ್ನೆ ನನ್ನ ಕಸಿನ್ ಮದ್ವೆಗೆ ಎಲ್ಲರನ್ನು ಕರೆದುಕೊಂಡು ಹೋಗಿದ್ದೆ. ಬರುವಾಗ ರಾತ್ರಿಯಾಗಿತ್ತು. ಟೈರ್ ಪಂಚರ್ ಆಗಿತ್ತು. ಕಾರ್‌ನ್ನು ತಳ್ಳಿಕೊಂಡು ಬಮದಿದ್ದೇವೆ. ಪರೀಕ್ಷೆ ಬರೆಯುವಷ್ಟು ಶಕ್ತಿ ಇಲ್ಲ ಎಂದು ಕೇಳಿಕೊಂಡರು.

ಇದಕ್ಕೆ ಪ್ರಿನ್ಸಿಪಾಲ್ ಸರಿ ಹಾಗಿದ್ರೆ, ನೀವೆಲ್ಲರೂ ನಾಲ್ಕು ದಿನ ಬಿಟ್ಟು ಪರೀಕ್ಷೆ ಬರೀರಿ ಅಂದ್ರು. ಸ್ನೇಹಿತರೆಲ್ಲಾ ಭಾರೀ ಖುಷಿಯಿಂದ ಪ್ಲಾನ್ ಮಾಡಿದವನ ಬೆನ್ನು ತಟ್ಟಿದ್ರು. ನಿನ್ ಐಡಿಯಾ ವರ್ಕ್ ಆಯ್ತು ಎಂದ್ರು.

ನಾಲ್ಕು ದಿನ ಚೆನ್ನಾಗಿ ಓದಿ ಪರೀಕ್ಷೆಗೆ ಪ್ರಿಪೇರ್ ಆದ್ರು. ಕಾಲೇಜಿಗೆ ಬಂದಾಗ ಪ್ರಿನ್ಸಿಪಾಲ್ ಹೇಳಿದ್ರು. ನೀವೆಲ್ಲರೂ ಬೇರೆ ಬೇರೆ ರೂಂನಲ್ಲಿ ಕುಳಿತು ಪರೀಕ್ಷೆ ಬರೆಯಬೇಕು ಎಂದು. ಚೆನ್ನಾಗಿ ಓದಿದ್ರಲ್ವಾ? ಕಾಪಿ ಮಾಡೋದೇನೂ ಇರಲಿಲ್ಲ. ಹಾಗಾಗಿ ವಿದ್ಯಾರ್ಥಿಗಳೆಲ್ಲ ನಮಗೆ ಒಕೆ ಸರ್ ಎಂದು ಹೇಳಿ ಎಲ್ಲಾ ಕಡೆ ಕುಳಿತುಕೊಂಡ್ರು.

ಪ್ರಶ್ನೆಪತ್ರಿಕೆ ಹೀಗಿತ್ತು..
ನಿಮ್ಮ ಹೆಸರೇನು? (1 ಅಂಕ)
ಕಾರ್‌ನ ಯಾವ ಟೈರ್ ಪಂಕ್ಷರ್ ಆಗಿತ್ತು? ( 99 ಅಂಕ)

ಮುಂದೇನಾಯ್ತು? ನೀವೇ ಊಹಿಸಬಹುದಲ್ವಾ? ಮಾಡಿದ್ದುಣ್ಣೋ ಮಹರಾಯ ಎಂಬ ಮಾತು ಎಷ್ಟು ಸತ್ಯ ಅಲ್ವಾ?

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!