ಐದು ಪೈಸೆ ನಾಣ್ಯ ತಂದರೆ ಹೊಟ್ಟೆತುಂಬಾ ಊಟ, ಇದ್ಯಾವ ಹೋಟೆಲ್ಲಪ್ಪಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಜಯವಾಡದ ಹೋಟೆಲ್ ಒಂದರಲ್ಲಿ ಐದು ಪೈಸೆ ನಾಣ್ಯ ಕೊಟ್ಟರೆ ಹೊಟ್ಟೆತುಂಬಾ ಅನ್‌ಲಿಮಿಟೆಡ್ ಊಟ ಕೊಡ್ತಾರೆ. ಹೌದು, ರಾಜ್‌ಭೋಗ್ ರೆಸ್ಟೋರೆಂಟ್‌ನಲ್ಲಿ ಐದು ಪೈಸೆಗೆ ಅನ್‌ಲಿಮಿಟೆಡ್ ಥಾಲಿ ನೀಡುತ್ತಿದ್ದಾರೆ. ಐದು ಪೈಸೆ ಕೊಟ್ಟ ಜನ ಹೊಟ್ಟೆ ತುಂಬಾ 35 ವೆರೈಟಿ ಊಟ ತಿಂದಿದ್ದಾರೆ.

ಈ ಬಗ್ಗೆ ರೆಸ್ಟೋರೆಂಟ್ ಓಪನ್ ಮುನ್ನವೇ ಭಾರೀ ಪ್ರಚಾರ ಮಾಡಿದ್ದು, ನಾಣ್ಯದ ಜೊತೆ ಜನ ಹೊಟೆಲ್ ಮುಂದೆ ಹಾಜರಾಗಿದ್ದರು. 500 ರೂಪಾಯಿ ಥಾಲಿಯನ್ನು ಐದು ಪೈಸೆಗೆ ನೀಡುವ ಗಿಮಿಕ್ ಮಾಡಿದ್ದು, ರೆಸ್ಟೋರೆಂಟ್ ಭಾರೀ ಫೇಮಸ್ ಆಗಿದೆ. 400  ಜನ ಬಂದರೆ ಹೆಚ್ಚು ಎಂದುಕೊಂಡಿದ್ದ ಹೊಟೇಲ್ ಮಾಲೀಕರಿಗೆ ಶಾಕ್ ಆಗಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಊಟ ಮಾಡಿದ್ದಾರೆ. ಐದು ಪೈಸೆ ನಾಣ್ಯ ಇಲ್ಲದವರಿಗೆ ಡಿಸ್ಕೌಂಟ್ ನೀಡಿ ಊಟ ಕೊಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!