ಈ ರೀತಿಯ ಸಂದರ್ಭ ಎದುರಾದರೆ ಮದುವೆಗೆ ಓಕೆ ಎನ್ನುವುದು ಒಳ್ಳೆಯದಲ್ಲ !

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಎದುರಾಗುವ ಸುಂದರ ಘಳಿಗೆ. ಅಂತಹ ಘಳಿಗೆಯನ್ನು ಯಾರೂ ಹಾಳುಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಹೀಗಿರುವಾಗ ನೀವು ಮದುವೆಯಾಗಬೇಕೆಂದಾಗ ಈ ರೀತಿಯ ಸಂದರ್ಭಗಳು ಎದುರಾದರೆ ಮದುವೆಗೆ ಓಕೆ ಎನ್ನುವುದು ಸೂಕ್ತವಲ್ಲ. ಹಾಗಾದ್ರೆ ಮದುವೆಗೆ ಓಕೆ ಎನ್ನದಿರಲು ಯಾವೆಲ್ಲಾ ಕಾರಣಗಳಿವೆ ಅಂತೀರಾ ಇಲ್ಲಿದೆ ಮಾಹಿತಿ.

1. ಒಂದು ವೇಳೆ ನಿಮ್ಮ ಸಂಗಾತಿಯ ಬಗ್ಗೆ ನಿಮಗೆ ಸರಿಯಾಗಿ ಗೊತ್ತಿಲ್ಲದಿದ್ದರೆ ಮದುವೆಗೆ ಓಕೆ ಎನ್ನುವುದು ಸೂಕ್ತವಲ್ಲ. ಅದಕ್ಕಾಗಿ ಸರಿಯಾಗಿ ವಿಚಾರಿಸಿ ನಂತರ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು.

2. ನೀವು ನಿಮ್ಮ ಸಂಗಾತಿಯಾಗುವವರೊಂದಿಗೆ ನಿಮ್ಮ ರಹಸ್ಯಗಳನ್ನು ಶೇರ್‌ ಮಾಡಲು ಹಿಂದೇಟು ಹಾಕುವುದಾದರೆ ನೀವಿನ್ನೂ ಮದುವೆಗೆ ಸಿದ್ದರಿಲ್ಲ ಎಂದರ್ಥ.

3. ಪ್ರೀತಿ ನಂಬಿಕೆಯಿದ್ದೆಡೆ ಜಗಳ, ಮುನಿಸು ಮತ್ತು ಕೋಪವಿರಬೇಕು. ಒಂದು ವೇಳೆ ನಿಮ್ಮಿಬ್ಬರ ನಡುವೆ ಜಗಳವೇ ಇಲ್ಲವೆಂದರೆ ಇಲ್ಲಿ ಏನೋ ಸರಿಯಿಲ್ಲವೆಂದೇ ಅರ್ಥ. ಹಾಗಾಗಿ ಒಮ್ಮೆ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿ.

4. ಹುಡುಗ ಮತ್ತು ಹುಡುಗಿ ಇಬ್ಬರ ನಡುವೆ ಅರ್ಥ ಮಾಡಿಕೊಳ್ಳುವ ಮತ್ತು ಗೌರವಿಸುವ ಭಾವನೆ ಇರಬೇಕು. ಒಂದು ವೇಳೆ ನಿಮ್ಮ ಮೌಲ್ಯಗಳಿಗೆ ಪ್ರಾಮುಖ್ಯತೆ ಇಲ್ಲವೆಂದರೆ ಅಂತಹವರನ್ನು ಮದುವೆಯಾಗುವ ಮುನ್ನ ಯೋಚಿಸುವುದು ಒಳಿತು.

5. ಒಂದು ವೇಳೆ ನಿಮ್ಮ ಸಂಗಾತಿಗೆ ಬೇರೆ ಕಡೆಗೆ ಆಕರ್ಷಣೆಯಿದ್ದರೆ ಮೊದಲು ಅದನ್ನು ತಿಳಿಯುವುದು ಮುಖ್ಯ. ಅದು ಸಾಬೀತಾದರೆ ಅಂತಹ ಬಂಧನ ಬೇಕಿರುವುದಿಲ್ಲ.

6. ಮದುವೆಯಾಗುವಾಗ ಯಾವಾಗ ಲೈಫ್‌ನಲ್ಲಿ ಸೆಟ್ಲ್‌ ಆಗುತ್ತೇನೆ ಎಂಬ ಐಡಿಯಾ ಇಲ್ಲದಿದ್ದರೆ, ನಿಜವಾಗಿಯೂ ಅಂತಹ ಸಂಬಂಧ ಬೇಕೇ ? ಎಂದು ಆಲೋಚಿಸಿ. ಗುರಿ ಮತ್ತು ಶ್ರಮವಿದ್ದು ಜೀವನ ನಡೆಸಲು ಸಿದ್ಧವಿದ್ದರೆ ಮಾತ್ರ ಬದುಕು ಸುಂದರವಾಗಲಿದೆ.

7. ಸಂಸಾರ ಎಂದರೆ ಹೊಂದಾಣಿಕೆ, ಅಂದಮೇಲೆ ಹೊಂದಾಣಿಕೆಗೆ ರೆಡಿಯಿಲ್ಲ ಎಂದಾದರೆ ಅಂತಹ ಸಂಗಾತಿಯನ್ನು ಹೇಗೆ ಒಪ್ಪುವಿರಿ ಎನ್ನುವುದನ್ನು ಒಮ್ಮೆ ಯೋಚಿಸಿ.

8. ನಾವು ಇನ್ನೊಬ್ಬರನ್ನು ಅವರು ಹೇಗಿದ್ದಾರೋ ಹಾಗೆ ಇಷ್ಟ ಪಡುವುದಾದರೆ ಅದನ್ನು ಪ್ರೀತಿ ಎನ್ನಬಹುದು. ಒಂದು ವೇಳೆ ನಿಮ್ಮ ಸಂಗಾತಿ ತುಂಬಾ ಬದಲಾಗಬೇಕು ಎಂದು ನೀವು ಬಯಸುವುದಾದರೆ ಅಂತಹ ಸಂಗಾತಿಯೊಂದಿಗೆ ಬದುಕನ್ನು ಆಯ್ಕೆ ಮಾಡಿಕೊಳ್ಳದಿರುವುದು ಒಳಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!