Saturday, August 13, 2022

Latest Posts

ವಾರಕ್ಕೆ ಮೂರು ಬಾರಿಯಾದರೂ ದೇವಸ್ಥಾನಕ್ಕೆ ಹೋಗುತ್ತೀರಾ? ದೇವಾಲಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ..

ಕೆಲವರು ಪ್ರತಿದಿನ ದೇವಸ್ಥಾನಕ್ಕೆ ಹೋಗುತ್ತಾರೆ. ಇನ್ನು ಹಲವರು ಅವರಿಗೆ ಬೇಕಾದ ವಾರಗಳಲ್ಲಿ ಹೋಗಿ ಬರುತ್ತಾರೆ. ಆದರೆ ದೇವಸ್ಥಾನಕ್ಕೆ ಹೋದಾಗ ನಾವು ಎಷ್ಟೋ ರೀತಿಯ ತಪ್ಪುಗಳನ್ನು ಮಾಡುತ್ತೇವೆ. ದೇವಾಲಯಕ್ಕೆ ತೆರಳಿದಾಗ ಈ ತಪ್ಪುಗಳನ್ನು ನೀವೆಂದೂ ಮಾಡಬೇಡಿ..

 • ಫೋನ್ ಸೈಲೆಂಟ್ ಮಾಡಿ
  ಇದನ್ನು ಅವರೇ ಬರೆದಿರುತ್ತಾರೆ. ಆದರೂ ನಿಮ್ಮ ರಿಂಗ್ ಟೋನ್ ಎಲ್ಲರಿಗೂ ಕೇಳಿಸುತ್ತೀರಿ. ನಿಮ್ಮ ಸುತ್ತಮುತ್ತಲ ಭಕ್ತರಿಗೆ ತೊಂದರೆ ಕೊಡುವ ಕೆಲಸ ಏಕೆ ಮಾಡಬೇಕು ಹೇಳಿ..
 • ಫೋಟೊ ಬೇಡ
  ದೇವರ ಫೋಟೊ ತೆಗೆಯಲು ಮುನ್ನುಗ್ಗುವದರಿಂದ ಬೇರೆಯವರಿಗೆ ಮುಜುಗರ ಆಗುತ್ತದೆ. ಅದಕ್ಕಿಂತ ಹೆಚ್ಚಾಗಿ ಮನಸ್ಸಿನಿಂದ ಭಕ್ತಿಯಿಂದ ದೇವರ ರೂಪ ಕಣ್ತುಂಬಿಕೊಳ್ಳಿ ಸಾಕು.
 • ಕಂಬಗಳೇ ಕರ್ಚೀಫ್
  ದೇವಸ್ಥಾನದಲ್ಲಿ ಕೊಡುವ ತೀರ್ಥ ಪ್ರಸಾದವನ್ನು ಸವಿಯುತ್ತೀರಿ. ತದನಂತರ ಕೈ ತೊಳೆಯುವ ಸರದಿ ಬರುತ್ತದೆ. ನಲ್ಲಿ ಹುಡುಕಿ ಕೈ ತೊಳೆಯುವ ಬದಲು ಕಂಬಗಳಿಗೆ ಕೈ ಒರೆಸಿ ಹೋಗುತ್ತೀರಿ. ಇದು ಒಳ್ಳೆಯ ಅಭ್ಯಾಸವಾ?
 • ಕ್ಯೂ ಬ್ರೇಕ್ ಮಾಡಬೇಡಿ
  ಅಲ್ಲಿ ಇರುವುದು ನನ್ನ ಅಣ್ಣ, ಅಣ್ಣಾ ಎಂದು ನುಗ್ಗಬೇಡಿ. ನಿಮ್ಮಂತೆಯೇ ದೇವರ ದರ್ಶನ ಪಡೆಯಲು ಉಳಿದವರೂ ಬರುತ್ತಾರೆ. ಎಲ್ಲರಿಗೂ ಒಂದೇ ರೂಲ್ಸ್ ಎನ್ನುವುದು ನೆನಪಿರಲಿ.
 • ಪಾದ ತೊಳೆದು ಬನ್ನಿ
  ನೀವು ಈಗಷ್ಟೇ ಸ್ನಾನ ಮಾಡಿಕೊಂಡು ಬಂದಿದ್ದರೂ ಪರವಾಗಿಲ್ಲ. ದೇವಾಲಯದ ಅಂಗಳದಲ್ಲಿ ಕಾಲು ತೊಳೆಯಿರಿ. ಒದ್ದೆ ಪಾದ ಇದ್ದರೂ ಪರವಾಗಿಲ್ಲ. ಕೊಳೆಯ ಪಾದಗಳು ಒಳಗೆ ಬರುವುದು ಬೇಡ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss