ಬದುಕಿನಲ್ಲಿ ಆತ್ಮವಿಶ್ವಾಸವಿದ್ದರೆ ಸಾಕು: ಪುಟ್ಟ ಹುಡುಗನ ಹಾಡಿಗೆ ಫಿದಾ ಆದ ನಾಗಾಲ್ಯಾಂಡ್​ನ ಸಚಿವ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಹಾಡು ಯಾರು ಬೇಕಾದರೂ ಹಾಡಬಹುದು. ಅಲ್ಲಿ ವಯಸ್ಸಿನ ಅಂತರವಿಲ್ಲ. ನಿಮ್ಮಲ್ಲಿ ಆತ್ಮವಿಶ್ವಾಸವಿದ್ದರೆ ಸಾಕು. ಅದೇ ರೀತಿ ಇಲ್ಲಿ ಒಬ್ಬ ಹುಡುಗ ಹಾಡನ್ನು ಹಾಡಿದ್ದಾನೆ. ಅದನ್ನು ಕೇಳುವಾಗ ಏನೋ ಮನಸ್ಸಿಗೆ ಖುಷಿ ಸಿಗುತ್ತದೆ.

43 ಸೆಕೆಂಡುಗಳ ಈ ಹಾಡು ನಾಗಾಲ್ಯಾಂಡ್​ನ ಸಚಿವ ತೆಮ್ಜೆನ್​ ಇಮ್ನಾ ಅಲಾಂಗ್​ ಟ್ವೀಟ್ ಮಾಡಿದ್ದಾರೆ. ‘ಇಷ್ಟು ಆತ್ಮವಿಶ್ವಾಸವಿದ್ದರೆ ಸಾಕು ಬದುಕಿನಲ್ಲಿ’ ಎಂದಿದ್ದಾರೆ ಸಚಿವರು.

ಸಚಿವರ ಟ್ವೀಟ್ ಇದೀಗ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆವಿಡಿಯೋ ಗಮನಿಸಿ, ಈ ಹುಡುಗನ ಸಹಪಾಠಿಗಳು ಇವನ ಹಾಡನ್ನು ಎಂಥ ಖುಷಿಯಿಂದ ಕೇಳುತ್ತಿದ್ದಾರೆ.

ಈ ಹಾಡು ನೇಪಾಳಿ ಭಾಷೆಯಲ್ಲಿದೆ. ವ್ಯಕ್ತಿಯೊಬ್ಬ ತನ್ನ ಅತ್ತೆ-ಮಾವನ ಮನೆಗೆ ಹೋಗಿ ಒಳ್ಳೆಯ ಊಟ ಮತ್ತು ಪಾನೀಯವನ್ನು ಸೇವಿಸುವ ಆಶಯವನ್ನು ವ್ಯಕ್ತಪಡಿಸುತ್ತಿರುವುದರ ಸುತ್ತ ಈ ಹಾಡಿನ ಸಾಹಿತ್ಯ ಹೆಣೆದುಕೊಂಡಿದೆ. ಅನೇಕರು ಈ ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!