ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮದುವೆ ಅಂದ್ರೆ ಸಂಭ್ರಮ, ಕೀಟಲೆ, ತಮಾಷೆ, ಮೋಜು-ಮಸ್ತಿ ಎಲ್ಲದರ ಸಮ್ಮಿಲನ. ಮದುವೆಯಲ್ಲಿ ಸಿಕ್ಕಾಪಟೆ ಎಂಜಾಯ್ ಮಾಡುವವರೆಂದರೆ ವದು/ವರನ ಫ್ರೆಂಡ್ಸ್. ಮದುಮಕ್ಕಳಿಗೆ ಕಿಚಾಯಿಸುತ್ತ ಫುಲ್ ಎಂಜಾಯ್ ಮಾಡುತ್ತಿರುತ್ತಾರೆ.
ಅಂತಹ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಅಂತಹದೇ ಮತ್ತೊಂದು ದೃಶ್ಯ ಎಲ್ಲೆಡೆ ಸದ್ದು ಮಾಡುತ್ತಿದೆ. ಈ ದೃಶ್ಯ ನೋಡಿದರೆ ಗ್ಯಾರೆಂಟಿ ಹೊಟ್ಟೆ ಹುಣ್ಣಾಗುವಷ್ಟು ನಗು ಬರುತ್ತದೆ.
ಇದು ವರನ ಸ್ನೇಹಿತರು ಗಿಫ್ಟ್ ಕೊಡುವ ತಮಾಷೆಯ ದೃಶ್ಯ. ala_motha_photographer ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ದೃಶ್ಯ ಶೇರ್ ಆಗಿದೆ.
ವಿಡಿಯೋದಲ್ಲಿ ಏನಿದೆ?
ನಾಲ್ಕು ಜನ ಸ್ನೇಹಿತರು ಬಹಳ ಕಷ್ಟಪಟ್ಟು ದೊಡ್ಡ ಬಾಕ್ಸ್ವೊಂದನ್ನು ಹಿಡಿದು ವಧು-ವರ ಇರುವ ವೇದಿಕೆಗೆ ಬರುತ್ತಾರೆ. ಹೀಗೆ ತಂದ ಗಿಫ್ಟ್ ನೋಡಿದರೆ ಅದು ನಿಮಗೆ ಫ್ರಿಡ್ಜ್ ಅಥವಾ ವಾಷಿಂಗ್ ಮಷಿನ್ನಂತೆ ಕಾಣುತ್ತದೆ. ಗಿಫ್ಟ್ ಮದುಮಕ್ಕಳ ಕೈಗಿಟ್ಟು ಗ್ರೂಪ್ ಫೋಟೋ ತೆಗಿಸಿಕೊಳ್ಳುತ್ತಾರೆ. ಕೊನೆಗೆ ಗೊತ್ತಾಗುತ್ತದೆ ಆ ಬಾಕ್ಸ್ ನಲ್ಲಿ ಏನು ಇಲ್ಲ, ಇದು ಖಾಲಿ ಬಾಕ್ಸ್ ಎಂದು. ವರನ ಸ್ನೇಹಿತರ ಈ ತಮಾಷೆಯನ್ನು ಕಂಡು ಅಲ್ಲಿದ್ದವರೆಲ್ಲ ಬಿದ್ದು ಬಿದ್ದು ನಗುತ್ತಾರೆ.
https://www.instagram.com/reel/CWaJhF6oeWd/?utm_source=ig_web_copy_link