spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮೆಹೆಂದಿ ಚೆನ್ನಾಗಿ ಕೆಂಪಗಾಗಬೇಕೆಂದರೆ ಈ ಟಿಪ್ಸ್‌ ಟ್ರೈ ಮಾಡಿ…

- Advertisement -Nitte

ಮೆಹೆಂದಿ ಎಂದರೆ ಹೆಣ್ಣುಮಕ್ಕಳಿಗೆ ಪಂಚಪ್ರಾಣ. ಹೆಣ್ಣು ಮಕ್ಕಳಿಗೆ ಯಾವುದೇ ಶುಭ ಸಂದರ್ಭವಿರಲಿ ಮೆಹೆಂದಿ ಹಾಕಿಕೊಳ್ಳುವುದು ಇಷ್ಟ. ಮನೆಯಲ್ಲಿ ಪೂಜೆ ಇರಲಿ, ಹುಟ್ಟುಹಬ್ಬ,  ಹಬ್ಬ- ಹರಿದಿನ, ಮದುವೆ ಹೀಗೆ ಎಲ್ಲ ಸಂದರ್ಭಗಳಲ್ಲಿ ಇದನ್ನು ಇಷ್ಟಪಡುತ್ತಾರೆ. ಆದರೆ ತುಂಬಾ ಜನರ ಕೈಗೆ ಮೆಹೆಂದಿ ಸರಿಯಾಗಿ ಕೆಂಪಗಾಗುವುದಿಲ್ಲ. ಅಂತವರು ಇನ್ಮುಂದೆ ಈ ಟಿಪ್ಸ್‌ ಟ್ರೈ ಮಾಡಿ. ಹೀಗೆ ಮಾಡಿದರೆ ಖಂಡಿತ ಮೆಹೆಂದಿ ಬೇಗ ಕೆಂಪಗಾಗುತ್ತದೆ.

  •  ಮೆಹೆಂದಿ ಹಚ್ಚಿಕೊಳ್ಳುವುದಕ್ಕೂ ಮೊದಲು ಖಾಲಿ ತಣ್ಣ ನೀರಿನಿಂದ ಕೈ ತೊಳೆದುಕೊಳ್ಳಿ. ಯಾವುದೇ ಸೋಪು, ಹ್ಯಾಂಡ್‌ ವಾಶ್‌ಗಳಿಂದ ತೊಳೆಯಬೇಡಿ.
  • ಮೆಹೆಂದಿ ಹಚ್ಚಿಕೊಳ್ಳುವುದಕ್ಕು ಮೊದಲು ವ್ಯಾಸಲಿನ್‌ ಪೆಟ್ರೋಲಿಯಂ ಜೆಲ್ಲಿಯನ್ನು ಕೈಗೆ ನೀಟ್‌ ಆಗಿ ಹಚ್ಚಿಕೊಂಡು ನಂತರ ಮೆಹೆಂದಿ ಬಿಡಿಸಿಕೊಳ್ಳಿ.
  • ರಾತ್ರಿ ಮಲಗುವುದಕ್ಕೂ ಮೊದಲು ಮೆಹೆಂದಿ ಹಚ್ಚಿಕೊಂಡು, ಕೈ ಅಲುಗಾಡಿಸದೇ ಮಲಗಿದರೆ ಮೆಹೆಂದಿ ಚೆನ್ನಾಗಿ ಹಿಡಿಯುತ್ತದೆ.
  • ಮೆಹೆಂದಿಯನ್ನು 5 ಗಂಟೆಗೂ ಹೆಚ್ಚು ಹೊತ್ತು ಇಟ್ಟುಕೊಳ್ಳಬೇಡಿ. ಜಾಸ್ತಿ ಹೊತ್ತು ಇಟ್ಟುಕೊಂಡರೆ ಕೆಂಪಗಾಗುವ ಬದಲು ಕಪ್ಪಗಾಗುತ್ತದೆ
  • ಮೆಹೆಂದಿ ಹಚ್ಚಿದ ಅರ್ಧ ಗಂಟೆ ನಂತರ ನಿಂಬುರಸವನ್ನು ಹತ್ತಿಗೆ ಹಚ್ಚಿಕೊಂಡು ಮೆಹೆಂದಿ ಡಿಸೈನೆ ಗೆ ಹಚ್ಚುತ್ತಿರಿ.
  • ಸಕ್ಕರೆಗೆ ನೀರಿಗೆ ಮೆಹೆಂದಿ ಕೆಂಪಗಾಗಿಸುವ ಶಕ್ತಿ ಇದೆ. ಮೆಹೆಂದಿ ಹಚ್ಚಿಕೊಂಡ ಅರ್ಧಗಂಟೆ ನಂತರ ಅದಕ್ಕೆ ಸಕ್ಕರೆ ನೀರನ್ನು ಸಿಂಪಡಿಸುತ್ತಿರಿ. ಬೇಗ ಮೆಹೆಂದಿ ಕೆಂಪಗಾಗುತ್ತದೆ.
  • ಮೆಂಹೆಂದಿಯನ್ನು ತೊಳೆದ ಬಳಿಕ ಕೈಗಳಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡರೆ ಮೆಹೆಂದಿ ಆಕರ್ಷಕವಾಗಿ ಕಾಣುತ್ತದೆ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss