ನಾಳೆ ಮಹಿಳೆಯರ ದಿನ. ಮಹಿಳೆಯರ ಬಗ್ಗೆ ನಿಮಗೆ ತಿಳಿಯದೇ ಇರುವ ಕೆಲ ವಿಷಯಗಳನ್ನು ನಾವು ತಿಳಿಸುತ್ತೇವೆ. ಮಹಿಳೆಯರನ್ನು ಅರ್ಥಮಾಡಿಕೊಳ್ಳಲು ಈ ವಿಷಯಗಳು ನಿಮಗೆ ಸಹಾಯ ಕೂಡ ಆಗಬಹುದು. ಮಹಿಳೆಯರ ದಿನ ಎಂದ ಕೂಡಲೆ ನಿಮ್ಮ ಮನೆಯ ಮಹಿಳೆಯರಿಗೆ ಗಿಫ್ಟ್ ನೀಡಬೇಕು, ಪಾರ್ಟಿ ಕೊಡಬೇಕು ಎಂದೇನಿಲ್ಲ. ಪ್ರೀತಿಯಿಂದ ಒಂದು ವಿಶ್ ಮಾಡಿ ಸಾಕು..
- ಪ್ರತಿ 90 ಸೆಕೆಂಡ್ಗೆ ಒಬ್ಬರು ಮಹಿಳೆಪ್ರೆಗ್ನೆನ್ಸಿ ಹಾಗೂ ಡೆಲಿವರಿ ಸಮಯದಲ್ಲಿ ಮೃತಪಡುತ್ತಾರೆ.
- ಮಹಿಳೆಯರು ಪ್ರತಿದಿನ 20 ಸಾವಿರಕ್ಕೂ ಹೆಚ್ಚು ಪದಗಳನ್ನು ಉಚ್ಛರಿಸುತ್ತಾರೆ.
- ವಿಶ್ವದ ಅತಿ ಹೆಚ್ಚು ಶ್ರೀಮಂತ ಮಹಿಳೆಯಲ್ಲಿ ಹೆಚ್ಚಿನವರು ತಮ್ಮ ಆಸ್ತಿಯನ್ನು ತಮ್ಮ ತಂದೆ ಅಥವಾ ಗಂಡನಿಂದ ಪಡೆದಿದ್ದಾರೆ.
- ರಷ್ಯಾದಲ್ಲಿ ಪುರುಷರಿಗಿಂತ ಹೆಚ್ಚು ಮಹಿಳೆಯರಿದ್ದಾರೆ.
- ಮಹಿಳೆಯರು ತಮ್ಮ ಜೀವಿತಾವಧಿಯ ಒಂದು ವರ್ಷವನ್ನು ಬಟ್ಟೆ ಖರೀದಿಸಲು ವ್ಯಯಿಸುತ್ತಾರೆ.
- ಮಹಿಳೆಯರು ವರ್ಷಕ್ಕೆ 30 ರಿಂದ 64 ಬಾರಿ ಅಳುತ್ತಾರೆ. ಪುರುಷರು ಕೇವಲ 7 ರಿಂದ 17 ಬಾರಿ ಮಾತ್ರ ಅಳುತ್ತಾರೆ.
- ಮಹಿಳೆಯರು ದಿನಕ್ಕೆ ಮೂರು ಬಾರಿ ಸುಳ್ಳು ಹೇಳುತ್ತಾರೆ. ಪುರುಷರು ಆರು ಬಾರಿ.
- ಮಹಿಳೆಯರ ಹೃದಯ ಪುರುಷರ ಹೃದಯಕ್ಕಿಂತ ಜೋರಾಗಿ ಬಡಿಯುತ್ತದೆ.
- ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ಟೇಸ್ಟ್ ಬಡ್ಸ್ ಇದೆ.