ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಕೊರೋನಾ ಮಹಾಮಾರಿಯನ್ನು ಎಷ್ಟೇ ಶಪಿಸಿದರೂ ಕೆಲವೊಮ್ಮೆಯಾದರೂ ಆ ಮಹಾಮಾರಿ ಕಲಿಸಿದ ಜೀವನ ಮೌಲ್ಯವನ್ನು ಆಗಾಗ ಮೆಲುಕುತ್ತಿರಲೇಬೇಕು. ಬೇರೆಯವರ ಕಷ್ಟ, ಬಡತನ, ಹಸಿವನ್ನು ಮೊದಲಿಗಿಂತ ಹೆಚ್ಚು ಅರ್ಥವಾಗಿದ್ದು ಬಹುಶ: ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಎಂದರೆ ತಪ್ಪಾಗಲಾರದು…
ಏನಕ್ಕೆ ಇಷ್ಟೋಂದು ಪೀಠಿಕೆ ಹಾಕತಿದ್ದೀನಿ ಗೊತ್ತಾ? ಇಲ್ಲೊಬ್ಬ ಮಹಾ ತಾಯಿ ಕಷ್ಟದಲ್ಲಿರುವ ಜನರಿಗೆ ಪ್ರತಿ ದಿನ ಉಚಿತವಾಗಿ ಬಿರಿಯಾನಿ ನೀಡಿ ಹೃದಯವಂತಿಕೆ ಮೆರೆದಿದ್ದಾರೆ.
ಈಗಿನ ಕಾಲದಲ್ಲಿ 1 ರೂ. ಚಾಕಲೇಟ್ ಫ್ರೀಯಾಗಿ ಯಾರು ಕೊಡೋದಿಲ್ಲ, ಇನ್ನೂ ಹೊಟ್ಟೆ ತುಂಬುವಷ್ಟು ಬಿರಿಯಾನಿ ಕೊಡ್ತಾರ ಅನ್ಬೇಡಿ! ಇದು ನೈಜ ಘಟನೆ…
ಕೊಯಮತ್ತೂರಿನ ಪುಲಿಯಾಕುಳಂನ ಮಹಿಳೆಯೊಬ್ಬರು ಕಷ್ಟದಲ್ಲಿರುವ ಜನರಿಗೆ ಆಹಾರ ಪೂರೈಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ.
ಮೇಜೊಂದರ ಮೇಲೆ ಬಿರಿಯಾನಿ ಪೊಟ್ಟಣಗಳನ್ನು ಇಟ್ಟು, “ನಿಮಗೆ ಹಸಿವಾದಲ್ಲಿ, ಇದನ್ನು ತೆಗೆದುಕೊಳ್ಳಿ” ಎಂದು ಬರೆದಿದ್ದಾರೆ. ಕಲಿಯುಗದ ಪ್ರತ್ಯಕ್ಷ ಅನ್ನಪೂರ್ಣೇಶ್ವರಿಯ ಈ ಕೆಲಸಕ್ಕೆ ಮೆಚ್ಚುಗೆಯ ಮಹಾ ಸಾಗರವೇ ಹರಿದು ಬಂದಿದೆ.
What a great gesture by this small roadside biryani shop in Puliakulam, Coimbatore.! Humanity at its best !!! ❤️ pic.twitter.com/VZYWgRzwaN
— RJ Balaji (@RJ_Balaji) April 15, 2021
ಆರ್. ಜೆ. ಬಾಲಾಜಿ ಅವರ ಮೂಲಕ ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. “ರಸ್ತೆ ಬದಿಯ ಬಿರಿಯಾನಿ ಶಾಪ್ನಿಂದ ಎಂಥ ಶ್ರೇಷ್ಠ ಕೆಲಸ! ಮಾನವೀಯತೆ ಅದರ ಉತ್ತುಂಗದಲ್ಲಿ” ಎಂದು ಚಿತ್ರಗಳಿಗೆ ಅಡಿಬರಹ ಬರೆದಿದ್ದಾರೆ. ಈ ಚಿತ್ರಗಳು ಸಾಕಷ್ಟು ಶೇರ್ ಆಗಿದ್ದು, ನೂರಾರು ಲೈಕ್, ಕಮೆಂಟ್ಸ್ ಬಂದಿದೆ.