ಶಾಸಕ ತನ್ವೀರ್ ಸೇಠ್‌ಗೆ ಜೀವ ಬೆದರಿಕೆ: ದೂರು ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾಸಕ ತನ್ವೀರ್ ಸೇಠ್‌ಗೆ ಜೀವ ಬೆದರಿಕೆ ಇದೆ ಎಂದು ಮೈಸೂರಿನಲ್ಲಿ ದೂರು ದಾಖಲಿಸಲಾಗಿದೆ. ಜೀವ ಬೆದರಿಕೆ ಇದೆ ಎಂದು ಮೈಸೂರಿನ ಉದಯಗಿರಿ, ಮಂಡಿ ಹಾಗೂ ಮೈಸೂರು ನಗರ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಬ್ಲ್ಯಾಕ್ ಸಮಿತಿ ದೂರು ನೀಡಿದೆ.

ಹಾಸನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಘು ಸಕಲೇಶಪುರ ಅವರು ತನ್ವೀರ್ ಸೇಠ್‌ರನ್ನು ಏಕವಚನದಲ್ಲಿ ನಿಂದಿಸಿದ್ದಾರೆ. ಟಿಪ್ಪು ಪ್ರತಿಮೆ ಸ್ಥಾಪಿಸುವ ಆಸೆ ಬಿಡದಿದ್ದರೆ ಕೊಲೆ ಮಾಡುವುದಾಗಿ ಬಹಿರಂಗ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ಬ್ಲ್ಯಾಕ್ ಸಮಿತಿ ಆರೋಪಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!