ಇಗ್ಗುತ್ತಪ್ಪ ಬೆಟ್ಟದಲ್ಲಿ ಬೆಂಕಿ: ವ್ಯಾಪಕವಾಗಿ ಹರಡಿದ ಕಾಡ್ಗಿಚ್ಚು!

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ಮಡಿಕೇರಿಯ ನಾಪೋಕ್ಲು ಸಮೀಪದ ಕಕ್ಕಬೆ ವ್ಯಾಪ್ತಿಯ ಇಗ್ಗುತ್ತಪ್ಪ(ಮಲ್ಮ) ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ವ್ಯಾಪಕವಾಗಿ ಹಬ್ಬಿದೆ.
ಶುಕ್ರವಾರ ಸಂಜೆ ಹೊತ್ತಿಗೆ ದೇವನೆಲೆ ಮಲ್ಮ ಬೆಟ್ಟಶ್ರೇಣಿ ಯಲ್ಲಿ ಕಾಡ್ಗಿಚ್ಚು ವ್ಯಾಪಕವಾಗಿ ಉರಿಯುತ್ತಿದೆ. ಈಚೆಗೆ ತಡಿಯಂಡಮೋಳ್ ಬೆಟ್ಟದಲ್ಲೂ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಕಡಿದಾದ ಪ್ರದೇಶವಾಗಿರುವುದರಿಂದ ಅಗ್ನಿಶಾಮಕದ ದಳದಿಂದ ನಿಂತ್ರಿಸಲು ಅಸಾಧ್ಯವೆಂದು ಸಾರ್ವಜನಿಕರು ತಿಳಿಸಿದ್ದಾರೆ. ಧಗೆ ಹೆಚ್ಚಿರುವುದರಿಂದ ಬೆಂಕಿ ಹೊತ್ತಿಕೊಂಡು ಉರಿಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!