ಉದ್ಯೋಗಾವಕಾಶದಲ್ಲಿ ನೂತನ ದಾಖಲೆ ಬರೆದ ಐಐಟಿ ಮದ್ರಾಸ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಭಾರತೀಯ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (ಐಐಟಿ ಮದ್ರಾಸ್) ಅತ್ಯಾಧಿಕ ಉದ್ಯೋಗಾವಕಾಶಗಳನ್ನು ನೀಡುವ ಮೂಲಕ ಹೊಸ ದಾಖಲೆ ಬರೆದಿದೆ.

2021-22ನೇ ಸಾಲಿನಲ್ಲಿ 380 ಕಂಪನಿಗಳು ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಒಟ್ಟು 1,199 ಉದ್ಯೋಗಾವಕಾಶಗಳನ್ನು ಒದಗಿಸಿದೆ. ಹೆಚ್ಚುವರಿಯಾಗಿ 231 ಪೂರ್ವ ಉದ್ಯೋಗವಕಾಶಗಳನ್ನೂ ಸಹ ನೀಡಲಾಗಿದೆ. 2018-19ರ ಶೈಕ್ಷಣಿಕೆ ವರ್ಷದಲ್ಲಿನ 1,151 ಉದ್ಯೋಗಾವಕಾಶಗಿಂತಲೂ ಹೆಚ್ಚಾಗಿ 2021-22ನೇ ಸಾಲಿನಲ್ಲಿ ಒಟ್ಟು 1,430 ಉದ್ಯೋಗಾವಕಾಶಗಳನ್ನು ನೀಡಲಾಗಿದೆ.

ಈ ಲೆಕ್ಕಾಚಾರವು 14 ಕಂಪನಿಗಳಿಂದ 45 ಅಂತಾರಾಷ್ಟ್ರೀಯ ಉದ್ಯೋಗಾವಕಾಶಗಳನ್ನೂ ಒಳಗೊಂಡಿದ್ದು, ಇದು ಮತ್ತೊಂದು ದಾಖಲೆಯಾಗಿದೆ. ಇದಲ್ಲದೆ ಈ ವರ್ಷ ಕ್ಯಾಂಪಸ್ ಸಂದರ್ಶನ 1 ಮತ್ತು 2ರಲ್ಲಿ 131 ಉಯೋನ್ಮುಖ ಕಂಪನಿಗಳು 199 ಉದ್ಯೋಗಾವಕಾಶಗಳನ್ನು ನೀಡಿವೆ. ಎಲ್ಲಾ 61 ಎಂಬಿಎ ವಿದ್ಯಾರ್ಥಿಗಳು ಕೂಡ ಈ ವರ್ಷ ಸ್ಥಾನ ಪಡೆದಿದ್ದಾರೆ. ಇದು ಐಐಟಿ ಮದ್ರಾಸ್‌ನ ಮ್ಯಾನೇಜ್‌ಮೆಂಟ್ ಸ್ಟಡೀಸ್ ವಿಭಾಗಕ್ಕೆ 100 ಪ್ರತಿಶತ ಉದ್ಯೋಗಾವಕಾಶಕ್ಕೆ ಕಾರಣವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!