ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಕಿರುತೆರೆ ಖ್ಯಾತಿಯ ನಟಿ ಭೂಮಿಶೆಟ್ಟಿ ಇದೀಗ ಹಿರಿತೆರೆಗೂ ಕಾಲಿಟ್ಟಿದ್ದಾರೆ.
ಭೂಮಿಶೆಟ್ಟಿ ಹಾಗೂ ನಾಗಭೂಷಣ ಅಭಿನಯಕ ‘ಇಕ್ಕಟ್ ‘ಸಿನಿಮಾ ಅಮೆಜಾನ್ ಪ್ರೈಮ್ನಲ್ಲಿ ಇಂದು ಬಿಡುಗಡೆಯಾಗಿದೆ. ಪವನ್ ಕುಮಾರ್ ಸ್ಟುಡಿಯೋಸ್ ಮತ್ತು ರಾಕೆಟ್ ಸೈನ್ಸ್ ಎಂಟರ್ಟೇನ್ಮೆಂಟ್ ಪ್ರೊಡಕ್ಷನ್ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣಗೊಂಡಿದೆ.
ಈಗಾಗಲೇ ವೆಬ್ ಸೀರಿಸ್ ನಿರ್ದೇಶನ ಮಾಡಿರುವ ಇಶಮ್ ಖಾನ್, ಹಸೀನ್ ಖಾನ್ ಇಕ್ಕಟ್ ಸಿನಿಮಾದ ನಿರ್ದೇಶಕರು. ಲಾಕ್ಡೌನ್ ಸಂಕಷ್ಟದ ಥೀಮ್ನಲ್ಲಿ ಇಕ್ಕಟ್ ಸಿನಿಮಾ ಮೂಡಿಬಂದಿದ್ದು, ಇದು ಪ್ರತಿ ಮನೆಯಲ್ಲೂ ನಡೆದ ಕಥೆಯಾಗಿದೆ. ಲಾಕ್ಡೌನ್ನಲ್ಲಿ ಭೂಮಿಶೆಟ್ಟಿಗೆ ಅವಕಾಶ ಒದಗಿಬಂದಿದ್ದು, ತುಂಬಾ ಖುಷಿಯಾಗಿ ನಟಿಸಿದ್ದೇನೆ ಎಂದು ಭೂಮಿ ಹೇಳುತ್ತಾರೆ. ಭಿನ್ನಾಭಿಪ್ರಾಯದ ಕಾರಣ ವಿಚ್ಚೇದನ ಹಂತದಲ್ಲಿದ್ದ ದಂಪತಿ ಲಾಕ್ಡೌನ್ ಕಾರಣದಿಂದ ಮನೆಯಲ್ಲೇ ಜೊತೆ ಇರಬೇಕಾದ ಸಂದರ್ಭವನ್ನು ಹಾಸ್ಯಮಯವಾಗಿ ಕಟ್ಟಿಕೊಟ್ಟಿದ್ದಾರೆ.