ಕತ್ರೀನಾ ಸಹೋದರನ ಜೊತೆ ಇಲಿಯಾನಾ ಡೇಟಿಂಗ್‌ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬಾಲಿವುಡ್‌ ನ ಮಾದಕ ಬೆಡಗಿ ಕತ್ರೀನಾಕೈಫ್‌ ನಿನ್ನೆ ತಮ್ಮ 39ನೇ ಹುಟ್ಟುಹಬ್ಬವನ್ನು ಮಾಲ್ಡೀವ್ಸ್ ನಲ್ಲಿ ಆಚರಿಸಿಕೊಂಡಿದ್ದಾರೆ. ತಮ್ಮ ಪತಿ ನಟ ವಿಕ್ಕಿ ಕೌಶಲ್‌, ಹಾಗೇ ವಿಕ್ಕಿಯ ಸಹೋದರ ಸನ್ನಿ ಕೌಶಲ್, ಶರ್ವರಿ ವಾಘ್, ಜೊತೆಗೆ ಕತ್ರಿನಾ ಕೈಫ್ ಅವರ ಸಹೋದರ ಸೆಬಾಸ್ಟಿಯನ್ ಕೂಡ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು. ಆದರೆ ಅವರು ಹಂಚಿಕೊಂಡಿರುವ ಸೆಲ್ಫಿಯೊಂದು ಇದೀಗ ಬೀ-ಟೌನ್‌ ಅಂಗಳದಲ್ಲಿ ಹೊಸ ಗಾಸಿಪ್‌ ಹುಟ್ಟುಹಾಕಿದೆ.

ಅವರೆಲ್ಲರ ಜೊತೆ ಇಲಿಯಾನಾ ಡಿಕ್ರೂಜ಼್ ಕೂಡ ಭಾಗವಹಿಸಿದ್ದರು. ಈ ಕುರಿತು ಸ್ವತಃ ಇಲಿಯಾನಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಕತ್ರೀನಾ ಹಾಗೇ ಅವರ ಗ್ಯಾಂಗ್‌ ನೊಂದಿಗಿನ ಸೆಲ್ಫೀಯನ್ನು ಹಂಚಿಕೊಂಡಿದ್ದಾರೆ. “ಸನ್ಶೈನ್, ಕಾಕ್ಟೇಲ್ಗಳು ಮತ್ತು ಸ್ವಲ್ಪ ಹುಟ್ಟುಹಬ್ಬದ ಕೇಕ್” ಎಂಬ ಶೀಷರ್ಷಿಕೆಯಡಿಯಲ್ಲಿ ಇಲಿಯಾನಾ ಹಂಚಿಕೊಂಡಿರುವ ಫೋಟೋ ಕ್ಯಾಟ್‌ ಸಹೋದರ ಸೆಬಾಸ್ಟಿಯನ್‌ ಜೊತೆ ಅವರು ಡೇಟಿಂಗ್‌ ಮಾಡುತ್ತಿದ್ದಾರಾ? ಎಂಬ ಊಹಾಪೋಹ ಹರಿದಾಡಲು ಕಾರಣವಾಗಿದೆ. ಆದರೆ, ಈ ಬಗ್ಗೆ ಇಬ್ಬರೂ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!