Sunday, August 14, 2022

Latest Posts

ಅಕ್ರಮ ಸ್ಫೋಟಕ ವಸ್ತು ಪತ್ತೆ: ಮಾಲೀಕ ಸೇರಿ ಮೂವರ ಬಂಧನ

ಹೊಸ ದಿಗಂತ ವರದಿ, ಧಾರವಾಡ:

ಅಕ್ರಮ ಸ್ಪೋಟಕ ವಸ್ತು ಸಂಗ್ರಹದ ಆರೋಪದ ಮೇರೆಗೆ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಕ್ರಷರ್ ಮಾಲೀಕ ಸೇರಿದಂತೆ ಮೂವರನ್ನು ಬಂಧಿಸಿದ ಘಟನೆಯು ಬುಧವಾರ ನಡೆದಿದೆ.
ಡಿ.ಬಿ.ಮಾಸೂರ ಸ್ಟೋನ್ ಕ್ರಷಿಂಗ್ ಇಂಡಸ್ಟ್ರೀಸ್ ಮಾಲೀಕ ದಯಾನಂದ ಮಾಸೂರ, ಕ್ರಷರ್ ಕಾರಕೂನ ಕೆಲಸ ಮಾಡುವ ಶಂಕರಗೌಡ ಗೌಡ್ರ ಹಾಗೂ ಬಾಗಲಕೋಟೆಯ ನವೀನಕುಮಾರ ವಾಲಿ ಬಂಧಿತರು.
ರಾಜ್ಯದಲ್ಲಿ ಹಲವೆಡೆ ನಡೆಯುವ ಸ್ಪೋಟಕ ಗಮನದಲ್ಲಿಟ್ಟುಕೊಂಡು ಕಾರ್ಯಾಚರಣೆ ನಡೆಸಿದ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು, ಅಕ್ರಮವಾಗಿ ಸಂಗ್ರಹಿಸಿದ್ದ ಸ್ಪೋಟಕ ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ.
ವಾಲಿ ಎಂಬುವನಿoದ ಅಕ್ರಮ ತರಿಸಿಕೊಳ್ಳುತ್ತಿದ್ದ ಸ್ಪೋಟಕ ವಶಕ್ಕೆ ಪಡೆದಿದೆ. ಕ್ರಷರ್ ಘಟಕದಲ್ಲಿ ಅವಿತ್ತಟ್ಟ ಸುಮಾರು 1,650 ಜಿಲೆಟಿನ್ ಕಡ್ಡಿಗಳು, 700 ಎಲೆಕ್ಟ್ರಾನಿಕ್ ಡಿಟೋನೇಟರಗಳನ್ನ ವಶಕ್ಕೆ ಪಡೆಯಲಾಗಿದೆ.
ಧಾರವಾಡ ಗ್ರಾಮೀಣ ಠಾಣೆ ಇನ್ಸಪೆಕ್ಟರ್ ಶ್ರೀಧರ ಸತಾರೆ ದಾಳಿಯ ನೇತೃತ್ವ ವಹಿಸಿದ್ದು, ಸಬ್ ಇನ್ಸಪೆಕ್ಟರ್ ಮಹೇಂದ್ರಕುಮಾರ ನಾಯಕ ಸೇರಿದಂತೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಯಾವುದೇ ದಾಖಲೆಗಳಿಲ್ಲದೆ, ಅಕ್ರಮವಾಗಿ ಸಂಗ್ರಹಿಸಿದ್ದ ರೂ.16,500 ಮೌಲ್ಯದ 1,650 ಜಿಲಟಿನ್ ಕಡ್ಡಿ ಮತ್ತು ರೂ.3,500 ಮೌಲ್ಯದ 700 ಎಲೆಕ್ಟಾçನಿಕ್ ಡಿಟೋನೇಟರ್ ಸ್ಪೋಟಕ ವಸು ವಶಕ್ಕೆ ಪಡೆದಿದೆ. ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಪ್ರಸಂಶೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss