spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅಕ್ರಮ ಗಾಂಜಾ ಮಾರಾಟ: ನಾಲ್ವರ ಬಂಧನ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಮುಂಡಗೋಡ:

ತಾಲೂಕಿನ ಸಾಲಗಾಂವ ಗ್ರಾಮದ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ 628 ಗ್ರಾಂ ಗಾಂಜಾ ಸಮೇತ ನಾಲ್ಕು ಜನರನ್ನು ಬಂದಿಸಿದ್ದಾರೆ.
ಸಾಲಗಾಂವ ಗ್ರಾಮದ ಗಂಗಪ್ಪಾ ಪರಸಣ್ಣನವರ,ಹಾನಗಲ್ ತಾಲೂಕಿನ ನವನಗರದ ಇಮ್ರಾನ ಅಹ್ಮದ ಬ್ಯಾಡಗಿ, ಅಕ್ಕಿ ಆಲೂರಿನ ಮಕಬೂಲಿಯಾ ನಗರದ ಮಹಮ್ಮದ ಇರ್ಪಾನ ತಿಮ್ಮಾಪುರ ಹಾಗೂ ಅಕ್ಕಿ ಆಲೂರಿನ ಶೇಖ ಮಹ್ಮದ ಅಶ್ಪಕ್ ಬಂಧಿತ ಆರೋಪಿಗಳಾಗಿದ್ದಾರೆ.
ಈವರು ನಾಲ್ಕು ಜನರು ಸೇರಿ ಸಾಲಗಾಂವ ಗ್ರಾಮದ ಹತ್ತಿರ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಮಂಗಳವಾರ ರಾತ್ರಿ ದಾಳಿ ಮಾಡಿ ಇವರ ಹತ್ತಿರವಿದ್ದ 20,000 ಸಾವಿರ ರೂಪಾಯಿ ಬೆಲೆಬಾಳುವ 628 ಗ್ರಾಂ ಗಾಂಜಾವನ್ನು ವಂಶಪಡಿಸಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್. ಬದರಿನಾಥ, ಮತ್ತು ಶಿರಸಿ ಡಿ.ಎಸ್.ಪಿ. ರವಿ ನಾಯ್ಕ ರವರ ಮಾರ್ಗದರ್ಶನದಲ್ಲಿ ಮುಂಡಗೋಡ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಭುಗೌಡ. ಡಿ. ಕೆ, ಪಿ.ಎಸ್.ಐ. ಬಸವರಾಜ ಮಬನೂರ ಹಾಗೂ ಸಿಬ್ಬಂದಿಯವರಾದ ಧರ್ಮರಾಜ ನಾಯ್ಕ,ಗಣಪತಿ ಹುನ್ನಳ್ಳಿ, ಶರತ ದೇವಳಿ,ವಿನೋದಕುಮಾರ, ಅರುಣ ಬಾಗೇವಾಡಿ, ತಿರುಪತಿ ಚೌಡಣ್ಣವರ,ಅಣ್ಣಪ್ಪ ಬುಡಗೇರ, ಗಿರೀಶ ಎಸ್.ಎಮ್ ಇವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss