ಅಕ್ರಮ ಮಾಂಸ ವ್ಯಾಪಾರ: ಯುಪಿ ಮಾಜಿ ಸಚಿವ ಯಾಕೂಬ್‌ ಖುರೇಷಿ, ಪುತ್ರನ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಕ್ರಮವಾಗಿ ಮಾಂಸ ವ್ಯಾಪಾರದಲ್ಲಿ ತೊಡಗಿದ ಆರೋಪದಡಿ ಉತ್ತರ ಪ್ರದೇಶದ ಮಾಜಿ ಸಚಿವ, ಬಿಎಸ್‌ಪಿ ನಾಯಕ ಯಾಕೂಬ್‌ ಖುರೇಷಿ ಹಾಗೂ ಅವರ ಪುತ್ರ ಇಮ್ರಾನ್‌ ಖುರೇಷಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಮೀರತ್‌ ಪೊಲೀಸರು ದೆಹಲಿಯ ಚಾಂದನಿ ಮಹಲ್‌ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಇಬ್ಬರೂ ಆರೋಪಿಗಳು ಚಾಂದನಿ ಮಹಲ್‌ನಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ಅಡಗಿದ್ದರು.

ಯಾಕೂಬ್‌ ಖುರೇಷಿ ಅವರು ಪರವಾನಗಿ ಇಲ್ಲದೆಯೇ ಮಾಂಸ ಮಾರಾಟ ದಂಧೆಯಲ್ಲಿ ತೊಡಗಿದ್ದು, ಆಹಾರ ಸಂಸ್ಕರಣೆ ಹಾಗೂ ಪ್ಯಾಕೇಜಿಂಗ್‌ ಘಟಕಗಳನ್ನು ಹೊಂದಿದ್ದಾರೆ.

2022ರ ಮಾರ್ಚ್‌ನಲ್ಲಿಯೇ ಮೀರತ್‌ ಪೊಲೀಸರು ಯಾಕೂಬ್‌ ಖುರೇಷಿ ಒಡೆತನದ ಮಾಂಸದ ಕಾರ್ಖಾನೆಗೆ ದಾಳಿ ನಡೆಸಿ, ಖುರೇಷಿ, ಅವರ ಪತ್ನಿ ಸಂಜೀದಾ ಬೇಗಂ, ಪುತ್ರರಾದ ಇಮ್ರಾನ್ ಹಾಗೂ ಫಿರೋಜ್‌ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಒಂದು ದಿನದ ಹಿಂದೆಯಷ್ಟೇ ಖುರೇಷಿ ಪುತ್ರ ಫಿರೋಜ್‌ ಪೊಲೀಸರಿಗೆ ಶರಣಾಗಿದ್ದಾನೆ. ಮಾಯಾವತಿ ಸರ್ಕಾರದಲ್ಲಿ ಖುರೇಷಿ ಸಚಿವರಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!