Friday, July 1, 2022

Latest Posts

ಅಕ್ರಮ ಸಂಬಂಧದ ಶಂಕೆ: ಯುವಕನ ಬರ್ಬರ ಹತ್ಯೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸ ದಿಗಂತ ವರದಿ ಕಲಬುರಗಿ:

ನಗರದ ಆಳಂದ ರಸ್ತೆಯಲ್ಲಿರುವ ‌ಮಹಿಳಾ ನಿಲಯದ ಆವರಣದಲ್ಲಿ ಯುವಕನನ್ನು ಬುಧವಾರ ‌ಸಂಜೆ ಕೊಲೆ ಮಾಡಲಾಗಿದೆ.

ದೇವಿ ನಗರದ ‌ನಿವಾಸಿ ಶೀತಲ್ ಜೈನ್ (35) ಕೊಲೆಯಾದ ಯುವಕ.

ತನಗೆ ಪರಿಚಯದ ಆಫ್ರೀನ್ ಎಂಬ ಮಹಿಳೆಯ ಇಬ್ಬರು ಮಕ್ಕಳು  ಮಹಿಳಾ ನಿಲಯದಲ್ಲಿದ್ದರು. ಅವರನ್ನು ಕರೆದುಕೊಂಡು ಹೋಗಲು ಆಫ್ರೀನ್ ಜೊತೆಗೆ ಶೀತಲ್ ಬಂದಿದ್ದರು.

ಈ ಬಗ್ಗೆ ‌ಮಾಹಿತಿ ಪಡೆದ ಮಹಿಳೆಯ ಸಹೋದರರಾದ ಅಮ್ಜದ್ ಮತ್ತು ಮೆಹಬೂಬ್ ಎಂಬುವವರು ಉದ್ದನೆಯ ಕುಡುಗೋಲಿನಿಂದ ಮುಖಕ್ಕೆ ಹೊಡೆದರು. ನಂತರ ಕಲ್ಲು ಎತ್ತಿ ಅಲ್ಲಿಂದ ಪರಾರಿಯಾಗಿದ್ದಾರೆ‌.

ಆಫ್ರೀನ್ ಹಾಗೂ ಶೀತಲ್ ಮಧ್ಯೆ ಅಕ್ರಮ ಸಂಬಂಧ ಇತ್ತು ಎಂಬ ಸಂಶಯದಿಂದ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಪ್ರಕರಣ ಸಂಬಂಧ ರಾಘವೇಂದ್ರ ನಗರ ‌ಠಾಣೆ ಪೊಲೀಸರು ಕುಲಸುಮ್ ಬಿ, ಅಮ್ಜದ್ ಮತ್ತು ಮೆಹಬೂಬ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss