spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 26, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸ್ಫೋಟಕ ವಸ್ತುಗಳ ಅಕ್ರಮ ಮಾರಾಟ: ಜನರಲ್ಲಿ ಹೆಚ್ಚಿದ ಆತಂಕ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………

ಹೊಸದಿಗಂತ ವರದಿ, ಮಂಡ್ಯ:

ಜಿಲ್ಲೆಯ ರೈತರ ಕಣ್ಮಣಿ ಕೃಷ್ಣರಾಜಸಾಗರ ಜಲಾಶಯಕ್ಕೆ ಸ್ಫೋಟಕಗಳ ಕಂಟಕ ತಪ್ಪಿಲ್ಲ. ಪೊಲೀಸರ ವಶದಲ್ಲಿದ್ದ ಭಾರೀ ಪ್ರಮಾಣದ ಸ್ಪೋಟಕ ವಸ್ತುಗಳು ಅಕ್ರಮವಾಗಿ ಮಾರಾಟವಾಗಿರುವ ಪ್ರಕರಣ ಬೆಳಕಿಗೆ ಬಂದಿರುವುದು ಜನರ ಆತಂಕ ಹೆಚ್ಚುವಂತೆ ಮಾಡಿದೆ.
4000 ಎಲೆಕ್ಟ್ರಿಕ್ ಡಿಟೋನೇಟರ್, 580 ನಾನ್ ಎಲೆಕ್ಟ್ರಿಕ್ ಡಿಟೋನೇಟರ್, 14,400 ಜಿಲೆಟಿನ್ ಕಡ್ಡಿಗಳನ್ನು ನಾಜೀಮುಲ್ಲಾ ಷರ್‌ಜೀ ಎಂಬಾತ ಅಕ್ರಮವಾಗಿ ಮಾರಾಟ ಮಾಡಿದ್ದಾನೆಂದು ಪೊಲೀಸರು ಆರೋಪಿಸಿದ್ದಾರೆ. ಈ ನಡುವೆ ಭಾರೀ ಪ್ರಮಾಣದ ಸ್ಫೋಟಕಗಳ ಅಕ್ರಮ ಮಾರಾಟದಲ್ಲಿ ಪೊಲೀಸರ ಕೈವಾಡವಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ.
ಆತಂಕಕ್ಕೆ ಕಾರಣ :
ಕಳೆದ ಜನವರಿ 21ರಂದು ರಾತ್ರಿ 9.45ರ ಸಮಯದಲ್ಲಿ ಪಾಂಡವಪುರ ತಾಲೂಕಿನ ಸುತ್ತಮುತ್ತ ಇರುವ ಕಲ್ಲು ಕೋರೆಗಳಿಗೆ ಮಾರಾಟ ಮಾಡುವ ಸಲುವಾಗಿ ಯಾವುದೇ ಪರವಾನಗಿ ಇಲ್ಲದೆ ಟಾಟಾ 407 ಗೂಡ್ಸ್ ವಾಹನ (ಕೆಎ-09 ಡಿ-7614) ದಲ್ಲಿ ಸ್ಪೋಟಕಗಳನ್ನು ತುಂಬಿಕೊಂಡು ಇಬ್ಬರು ವ್ಯಕ್ತಿಗಳು ಕೆ.ಆರ್.ನಗರದ ಭೇರ‌ಲ್ ಕಡೆಯಿಂದ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಕಡೆಗೆ ಬರುತ್ತಿದ್ದರು. ಈ ಮಾಹಿತಿ ತಿಳಿದು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಸಿ.ಎಸ್.ಸುರೇಶ್ ಅವರು ಸಿಬ್ಬಂದಿ ಜೊತೆ ಸ್ಥಳಕ್ಕೆ ತೆರಳಿದರು. ರಾತ್ರಿ 9 ಗಂಟೆ ಸಮಯಕ್ಕೆ ಅಕ್ಕಿಹೆಬ್ಬಾಳು ಗ್ರಾಮದ ಬ್ಯಾಂಕ್ ಆ್ ಬರೋಡಾ ಮುಂಭಾಗ ವಾಹನಗಳನ್ನು ಪರಿಶೀಲಿಸುತ್ತಿದ್ದಾಗ ಅಲ್ಲಿಗೆ ಬಂದ ಗೂಡ್ಸ್ ವಾಹವನ್ನು ತಡೆದು ನಿಲ್ಲಿಸಿದಾಗ ಅದರಲ್ಲಿದ್ದ ಇಬ್ಬರು ವ್ಯಕ್ತಿಗಳು ಪರಾರಿಯಾದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss