Sunday, August 14, 2022

Latest Posts

ಅಕ್ರಮ ಮರ ಸಂಗ್ರಹ: ಮರದ ಮಿಲ್ ಮುಟ್ಟುಗೋಲು

ಹೊಸದಿಗಂತ ವರದಿ, ಕೊಡಗು:

ಬೀಟೆ ಮರದ ನಾಟಾಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪದಡಿ ಮಿಲ್ ಮಾಲಕನನ್ನು ಬಂಧಿಸಿ ಮರದ ಮಿಲ್ ಅನ್ನು ಅರಣ್ಯಾಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಕುಶಾಲನಗರ  ವ್ಯಾಪ್ತಿಯ ಗುಮ್ಮನಕೊಲ್ಲಿ ಗ್ರಾಮದ ಸೆಲೆಕ್ಟ್ ಮರದ ಮಿಲ್‌ನಲ್ಲಿ ಮರದ ಹೊಟ್ಟಿನಲ್ಲಿ ಬೀಟೆ ಮರದ 14 ಹಾಗೂ ಬಾಗೆ ಮರದ 5 ನಾಟಾಗಳನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ನಿಜಾಮುದ್ದಿನ್ (35) ಎಂಬಾತನನ್ನು ಬಂಧಿಸಿ ಮಿಲ್ ಅನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಅರಣ್ಯ ವಲಯ ಅಧಿಕಾರಿ ಅನನ್ಯಕುಮಾರ್ ತಿಳಿಸಿದ್ದಾರೆ.

ಉಪ ವಲಯ ಅರಣ್ಯಾಧಿಕಾರಿ ಕೆ.ವಿ.ಸುಬ್ರಮಣ್ಯ, ಅನಿಲ್ ಡಿಸೋಜ, ಅರಣ್ಯ ರಕ್ಷಕರಾದ ಮಂಜೇಗೌಡ, ಆನಂದ್ ಮಾಲಗುಂದ, ವೀಕ್ಷಕರಾದ ಮೇದಪ್ಪ, ವಾಹನ ಚಾಲಕ ನಾರಾಯಣ ರೈ, ಆರ್‌ಆರ್‌ಟಿ ಸಿಬ್ಬಂದಿಗಳಾದ ಶಾಂತ, ಪ್ರದೀಪ್, ಸುನಿಲ್, ದಿಲೀಪ್, ರವಿ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss